Connect with us


      
ದೇಶ

ಡಾನ್ಸ್‌ ಬಾರ್‌ನ ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರ ರಕ್ಷಣೆ

Vidyashree S

Published

on

ಮುಂಬೈ: ಇಲ್ಲಿಯ ಅಂಧೇರಿಯಲ್ಲಿರುವ ಡಾನ್ಸ್‌ ಬಾರ್‌ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 17 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೇಕಪ್‌ ಕೊಠಡಿ ಬಳಿಯಿದ್ದ ರಹಸ್ಯ ನೆಲಮಾಳಿಗೆಯಲ್ಲಿ ಮಹಿಳೆಯರು ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಬಾರ್‌ ಆವರಣದಲ್ಲಿ ಇರಿಸಲಾಗಿದ್ದ ಸುಧಾರಿತ ಎಲೆಕ್ಟ್ರಾನಿಕ್‌ ಸಿಸ್ಟಂ ಸಹಾಯದಿಂದ ಬಾರ್‌ ಅಧಿಕಾರಿಗಳಿಗೆ ದಾಳಿಯ ಮುನ್ಸೂಚನೆ ದೊರಕಿತ್ತು. ಹೀಗಾಗಿ ಮಹಿಳೆಯರನ್ನು ಅಡಗಿಸಿ ಇಟ್ಟಿದ್ದರು.

ದೀಪಾ ಬಾರ್‌ನಲ್ಲಿ ಗ್ರಾಹಕರ ಮುಂದೆ ಮಹಿಳೆಯರು ನೃತ್ಯ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು.

“ಶೋಧ ಕಾರ್ಯಾಚರಣೆ ಪೊಲೀಸ್‌ ತಂಡದ ಯೋಜನೆಯಂತೆ ನಡೆಯಲಿಲ್ಲ. ಬಾರ್‌ನಲ್ಲಿರುವ ಹಲವು ಕೊಠಡಿಗಳಲ್ಲಿ ಹುಡುಕಾಡಿದರೂ, ಮಹಿಳೆಯರು ಪತ್ತೆಯಾಗಿರಲಿಲ್ಲ. ಬಾರ್‌ ಸಿಬ್ಭಂದಿ, ಅಧಿಕಾರಿಗಳ ವಿಚಾರಣೆ ನಡೆಸಿದರೂ, ಅವರಿಂದ ಸೂಕ್ತ ಉತ್ತರ ದೊರಕಿರಲಿಲ್ಲ. ಈ ವೇಳೆ ಮೇಕಪ್‌ ಕೊಠಡಿಯಲ್ಲಿದ್ದ ದೊಡ್ಡ ಕನ್ನಡಿ ಪೊಲೀಸರ ಗಮನ ಸೆಳೆಯಿತು. ಸತತ ಪ್ರಯತ್ನದ ನಂತರ ಕನ್ನಡಿಯನ್ನು ತೆಗೆದಾಗ ರಹಸ್ಯ ನೆಲಮಾಳಿಗೆ ಮಾರ್ಗವು ಕಂಡುಬಂತು. ಗೋಪ್ಯ ಕತ್ತಲ ಕೋಣೆಯಲ್ಲಿ ಹದಿನೇಳು ನೃತ್ಯಗಾರರು ಇದ್ದರು. ಅಲ್ಲಿ ಎಸಿ, ಬೆಡ್‌ ಸೇರಿದ್ದಂತೆ ಸಕಲ ಸೌಲಭ್ಯಗಳಿದ್ದವು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್‌ ಮ್ಯಾನೇಜರ್‌ ಮತ್ತು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ.

Share