Published
2 months agoon
ಮ್ಯಾಡ್ರಿಡ್: ಜೂನ್ 25 (ಯು.ಎನ್.ಐ.) ಸ್ಪೇನ್ನ ಉತ್ತರ ಆಫ್ರಿಕಾದ ಮೆಲಿಲ್ಲಾ ಪ್ರದೇಶದಲ್ಲಿ ವಲಸಿಗರು ಮತ್ತು ಗಡಿ ಅಧಿಕಾರಿಗಳ ನಡುವೆ 2 ಗಂಟೆಗಳ ಘರ್ಷಣೆಯ ನಂತರ ಗಡಿ ಪ್ರವೇಶಿಸಲು ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಸುಮಾರು 2,000 ವಲಸಿಗರು ಗಡಿಯಲ್ಲಿನ ಎತ್ತರದ ಬೇಲಿಗೆ ನುಗ್ಗಿದರು. ಇದು ಭದ್ರತಾ ಪಡೆಗಳು ಹಾಗೂ ವಲಸಿಗರ ಮಧ್ಯೆ ಘರ್ಷಣೆಗೆ ಕಾರಣವಾಯಿತು ಎಂದು ಮೊರೊಕನ್ ಮತ್ತು ಸ್ಪ್ಯಾನಿಷ್ ಅಧಿಕಾರಿಗಳನ್ನು ಉಲ್ಲೇಖಿಸಿ ವಿಒಎ ನ್ಯೂಸ್ ವರದಿ ಮಾಡಿದೆ. ಈ ವೇಳೆ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಇದಕ್ಕೂ ಮುನ್ನ ಘಟನೆಯಲ್ಲಿ ಐವರು ವಲಸಿಗರು ಸಾವನ್ನಪ್ಪಿದ್ದಾರೆ ಮತ್ತು 76 ಮಂದಿ ಗಾಯಗೊಂಡಿದ್ದಾರೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ಈ ಹಿಂದೆ ಹೇಳಿತ್ತು. ನಂತರ ಇನ್ನೂ 13 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೊರೊಕನ್ ಭದ್ರತಾ ಪಡೆಗಳ ಸುಮಾರು 140 ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ; ವೆಂಟಿಲೇಟರ್ ನಿಂದ ಬಿಡುಗಡೆ
ಆಸ್ಟ್ರೇಲಿಯಾದ ಕ್ಯಾನ್ಬೆರಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಬಂದೂಕಿನೊಂದಿಗೆ ಓರ್ವನ ಬಂಧನ
ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿಗೆ ಚಾಕು ಇರಿತ, ವೆಂಟಿಲೇಟರ್ ನಲ್ಲಿಯೇ ಮುಂದುವರೆದ ಚಿಕಿತ್ಸೆ
ಹಲ್ಲೆಗೊಳಗಾಗಿರುವ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯ ಸ್ಥಿತಿ ಗಂಭೀರ; ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ
ತೈವಾನ್ ; ಆಗಮಿತ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ರದ್ದು
ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!