Published
6 months agoon
By
Vanitha Jainನ್ಯೂಯಾರ್ಕ್: ಜನೆವರಿ 10 (ಯು.ಎನ್.ಐ.) ಬಹುಮಹಡಿ ಬ್ರಾಂಕ್ಸ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ. ಇದು ಮೂರು ದಶಕಗಳಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಅತ್ಯಂತ ಭೀಕರ ಬೆಂಕಿ ಅವಘಡವಾಗಿದೆ.
ಅಪಾರ್ಟ್ಮೆಂಟ್ ಸ್ಪೇಸ್ ಹೀಟರ್ನಿಂದಾಗಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ತುಂಬಿಕೊಂಡಿತ್ತು. ಇದರಿಂದ ಪಾರಾಗಲು ಹರಸಾಹಸ ಪಟ್ಟರೂ 19 ಮಂದಿ ಜೀವಕಳೆದುಕೊಂಡಿದ್ದಾರೆ. ಇನ್ನು ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಕೆಲವು ಅಂತಸ್ತಿನಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಐದು ಡಜನ್ಗಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 13 ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ಅಗ್ನಿಶಾಮಕ ಆಯುಕ್ತರು ತಿಳಿಸಿದ್ದಾರೆ.
ಸತ್ತ ಮಕ್ಕಳು 16 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದು ಆಡಮ್ಸ್ನ ಹಿರಿಯ ಸಲಹೆಗಾರ ಸ್ಟೀಫನ್ ರಿಂಗೆಲ್ ಹೇಳಿದ್ದಾರೆ. ಅನೇಕ ನಿವಾಸಿಗಳು ಮೂಲತಃ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಿಂದ ಬಂದವರು ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದರು.
19 ಅಂತಸ್ತಿನ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿನ ಅಪಾರ್ಟ್ ಮೆಂಟ್ನಲ್ಲಿ “ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಿಕ್ ಸ್ಪೇಸ್ ಹೀಟರ್ನಲ್ಲಿ ಬೆಂಕಿ ಅವಘಡ ಸಂಭವಿಸಲು ಕಾರಣ ಎಂದು ತಿಳಿದು ಬಂದಿದೆ.
46 ವಲಸಿಗರ ಮೃತದೇಹ ಪತ್ತೆ; ಮಾನವ ಕಳ್ಳಸಾಗಣಿಕೆ ಶಂಕೆ
ಸ್ಕೂಟರ್ ನಲ್ಲಿ ಹೋಗ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್ ನಿಂದ ಉಳಿದ ಜೀವ
ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ದಕ್ಷಿಣ ಆಫ್ರಿಕಾದ ನೈಟ್ಕ್ಲಬ್ನಲ್ಲಿ 17 ಮಂದಿ ಶವವಾಗಿ ಪತ್ತೆ!
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ
ಶ್ರೀಲಂಕಾಕ್ಕೆ ನೆರವು ನೀಡಲು ರಷ್ಯಾ ಸಿದ್ಧ: ಸಿರಿಸೇನಾ