Connect with us


      
ದೇಶ

ತಮಿಳುನಾಡು; ಗಣಿ ಕ್ವಾರಿಗೆ ಬಂಡೆಗಳು ಉರುಳಿಬಿದ್ದು ಇಬ್ಬರು ಕಾರ್ಮಿಕರ ಸಾವು

Lakshmi Vijaya

Published

on

ಚೆನ್ನೈ: ಮೇ 17 (ಯು.ಎನ್.ಐ.) ತಮಿಳುನಾಡಿನಲ್ಲಿ ತೆರೆದ ಗಣಿಯ ಕ್ವಾರಿಯೊಂದರಲ್ಲಿ ಬಂಡೆಗಳು ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.  ಆರು ಕಾರ್ಮಿಕರಲ್ಲಿ ಇಬ್ಬರು 300 ಅಡಿ ಆಳದಲ್ಲಿ ಕಳೆದ 60 ಗಂಟೆಗಳ ಕಾಲದಿಂದ ಸಿಕ್ಕಿಬಿದ್ದಿದ್ದು ಇಬ್ಬರನ್ನು ರಕ್ಷಿಸಲಾಗಿದೆ.

ಶನಿವಾರ ರಾತ್ರಿ ತಿರುನಲ್ವೇಲಿ ಜಿಲ್ಲೆಯ ಮುನೀರ್ ಪಲ್ಲಂ ಪ್ರದೇಶದಲ್ಲಿ ಬಂಡೆಗಳು ಮೇಲಿನಿಂದ ಉರುಳಿದ ನಂತರ ಮತ್ತು ದೈತ್ಯಾಕಾರದ ಕಲ್ಲು ಕ್ವಾರಿಗೆ ಬಿದ್ದಿದ್ದರಿಂದ ಕಾರ್ಮಿಕರು ಸಿಲುಕಿಕೊಂಡರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಭಾನುವಾರ ಮೂವರು ಕಾರ್ಮಿಕರನ್ನು ರಕ್ಷಿಸಲಾಯಿತು ಆದರೆ ಅವರಲ್ಲಿ ಒಬ್ಬರು ಗಾಯಗೊಂಡಿದ್ದರಿಂದ ಸಾವನ್ನಪ್ಪಿದರು. ಉಳಿದ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗಾಯಗೊಂಡವರಿಗೆ  1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.ಇದೇ ವೇಳೆ ಜಿಲ್ಲಾಧಿಕಾರಿ ವಿ ವಿಷ್ಣು ಮಾತನಾಡಿ, ಖಾಸಗಿ ಕಲ್ಲು ಕ್ವಾರಿಗೆ 2018ರಲ್ಲಿ ಪರವಾನಗಿ ದೊರೆತಿದ್ದು, ಮುಂದಿನ ವರ್ಷ ರಿನೀವಲ್ ಮಾಡಿಕೊಳ್ಳಬೇಕಾಗಿತ್ತು ಎಂದಿದ್ದಾರೆ.

ನಿಯಮ ಉಲ್ಲಂಘನೆ ಆರೋಪದ ಮೇಲೆ ಕ್ವಾರಿಯ ಪರವಾನಗಿದಾರನನ್ನು ಬಂಧಿಸಲಾಗಿದೆ. ಅಕ್ರಮಗಳನ್ನು ಪರಿಶೀಲಿಸಲು ತಮಿಳುನಾಡಿನಾದ್ಯಂತ ಕ್ವಾರಿಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದೆ.

Share