Connect with us


      




ದೇಶ

ಸಂಸತ್‌ ದಾಳಿ: ಹುತಾತ್ಮರಿಗೆ ಶ್ರದ್ದಾಂಜಲಿ

Vidyashree S

Published

on

ನವದೆಹಲಿ: ಇಪ್ಪತ್ತು ವರ್ಷಗಳ ಹಿಂದೆ (2001ರ ಡಿ.13) ಸಂಸತ್‌ ಮೇಲೆ ಉಗ್ರರು ನಡೆಸಿದ ದಾಳಿಗೆ ಬಲಿಯಾದವರಿಗೆ ಶುಕ್ರವಾರ ಸಂಸತ್‌ ಶ್ರದ್ಧಾಂಜಲಿ ಸಲ್ಲಿಸಿತು.

ಶಸ್ತ್ರಸಜ್ಜಿತ ಪಾಕ್‌ ಉಗ್ರರು ಸಂಸತ್‌ ಭವನದ ಮೇಲೆ ದಾಳಿ ನಡೆಸಿದಾಗ 14 ಮಂದಿ ಮೃತಪಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಕೇಂದ್ರ ಸಚಿವರು ಹುತಾತ್ಮರಿಗೆ ನಮನ ಸಲ್ಲಿಸಿದರು.

“2001 ರಲ್ಲಿ ಈ ದಿನದಂದು ತಮ್ಮ ಪ್ರಾಣವನ್ನು ಅರ್ಪಿಸಿದ ಕೆಚ್ಚೆದೆಯ ಭದ್ರತಾ ಸಿಬ್ಬಂದಿಗೆ ನಾನು ಗೌರವ ಸಲ್ಲಿಸುತ್ತೇನೆ. ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದವರಿಗೆ ರಾಷ್ಟ್ರವು ಶಾಶ್ವತವಾಗಿ ಕೃತಜ್ಞರಾಗಿರಬೇಕು” ಎಂದು ರಾಷ್ಟ್ರಪತಿ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

Share