Published
6 months agoon
ಮುಂಬೈ : ಜನೆವರಿ 11 (ಯು.ಎನ್.ಐ.) ಚೀನಾದ ಮೊಬೈಲ್ ಫೋನ್ ತಯಾರಕ ವಿವೋ ಇನ್ನು ಮುಂದೆ ಐಪಿಎಲ್ ಟೈಟಲ್ ಪ್ರಾಯೋಜಕರು ಆಗಿರುವುದಿಲ್ಲ. ಅವರ ಸ್ಥಾನವನ್ನು ಭಾರತದ್ದೇ ಆದ ಟಾಟಾ ಗ್ರೂಪ್ ತುಂಬಲಿದೆ. ಮುಂದಿನ ವರ್ಷ ಅಂದರೆ 2023 ರಿಂದ ಐಪಿಎಲ್ ಪಂದ್ಯಾವಳಿಯನ್ನು “ಟಾಟಾ ಐಪಿಎಲ್” ಎಂದು ಕರೆಯಲಾಗುತ್ತದೆ. ಕಳೆದ ವರ್ಷ, ಚೀನಾ ಮತ್ತು ಭಾರತದಲ್ಲಿನ ಉದ್ವಿಗ್ನತೆಯ ಮಧ್ಯೆ ಟೈಟಲ್ ಹಕ್ಕುಗಳನ್ನು ವಿವೋನಿಂದ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ ಆಗಿರಲಿಲ್ಲ. ವಿವೋ 2022 ರವರೆಗೆ ಮಾತ್ರ ಐಪಿಎಲ್ನ ಪ್ರಾಯೋಜಕ ಹಕ್ಕನ್ನು ಪಡೆದಿದೆ. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿವೋದಿಂದ ಪ್ರತಿ ವರ್ಷ ಬಿಸಿಸಿಐಗೆ 440 ಕೋಟಿ!
ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಚೀನಾ ಮೂಲದ ವಿವೋ ಕಂಪನಿ ಪ್ರತಿ ವರ್ಷ ಬಿಸಿಸಿಐಗೆ 440 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು. ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ಯುದ್ಧ ಭೀತಿ ಉಂಟಾದಾಗ ಐಪಿಎಲ್ ಗೆ ಏಕೆ ಚೀನಾ ಕಂಪನಿಯ ಸ್ಪಾನ್ಸರ್ ಶಿಪ್ ಎಂದು ವಿವಾದ ಉಂಟಾಗಿತ್ತು. ಭಾರತದಲ್ಲಿ ತೀವ್ರ ಪ್ರತಿಭಟನೆ ಉಂಟಾದ ಹಿನ್ನೆಲೆಯಲ್ಲಿ ವಿವೋ ಒಂದು ವರ್ಷ ಪ್ರಾಯೋಜಕತ್ವದಿಂದ ದೂರ ಉಳಿಯಬೇಕಾಯಿತು. ಈ ಹಿಂದೆ ಐಪಿಎಲ್ 2020ರಲ್ಲಿ ಫ್ಯಾಂಟಸಿ ಗೇಮಿಂಗ್ ಸಂಸ್ಥೆ ಡ್ರೀಮ್-11 ಶೀರ್ಷಿಕೆಯ ಪ್ರಾಯೋಜಕರಾಗಿದ್ದರು. ಇದಕ್ಕಾಗಿ ಡ್ರೀಮ್-11 ಬಿಸಿಸಿಐಗೆ 222 ಕೋಟಿ ನೀಡಿತ್ತು. ಈ ಒಪ್ಪಂದವು ಆಗಸ್ಟ್ 18 ರಿಂದ 2020 ಡಿಸೆಂಬರ್ 31 ರವರೆಗೆ ಮಾತ್ರ ಇತ್ತು. ಈ ಮೊತ್ತ ಪ್ರತಿ ವರ್ಷ ವಿವೋ ಕಂಪನಿ ಪಾವತಿ ಮಾಡುತ್ತಿದ್ದ ಮೊತ್ತದ ಅರ್ಧದಷ್ಟಿತ್ತು.
2022 ರವರೆಗೆ ಐಪಿಎಲ್ ವಿವೋ ಪ್ರಾಯೋಜಕತ್ವ
ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕಾಗಿ ವಿವೋ ಕಂಪನಿಯೊಂದಿಗೆ 2,190 ಕೋಟಿ ರೂಪಾಯಿಗೆ 5 ವರ್ಷಗಳ ಕಾಲ ಕಾಂಟ್ರ್ಯಾಕ್ಟ್ ಆಗಿತ್ತು. ಈ ಒಪ್ಪಂದದ ಪ್ರಕಾರ ಚೀನಿ ಕಂಪನಿ ವಾರ್ಷಿಕ 440 ಕೋಟಿ ರೂ. ಮೊತ್ತದಂತೆ 2018 ರಿಂದ 2022 ರವರೆಗೆ ಪಾವತಿ ಮಾಡಬೇಕಿತ್ತು. ಈ ಹಿಂದೆ ಚೀನಿ ವಿವೋ ಕಂಪನಿಯೊಂದಿಗಿನ ಒಪ್ಪಂದವನ್ನು 2023ರವರೆಗೆ ವಿಸ್ತರಿಸಬಹುದು ಎಂಬ ಸುದ್ದಿ ಇತ್ತು. ಆದರೆ, ಚೀನಿ ಕಂಪನಿಗೆ ಗೇಟ್ ಪಾಸ್ ಕೊಟ್ಟು, ಸ್ವದೇಶಿ ಕಂಪನಿ ಟಾಟಾಗೆ ಬಿಸಿಸಿಐ ಮಣೆ ಹಾಕಿದೆ.
ಸೆಂಟ್ರಲ್ ಹಾಗೂ ಟೈಟಲ್ ನಡುವಿನ ವ್ಯತ್ಯಾಸ ಏನು?
ಕೇಂದ್ರ ಪ್ರಾಯೋಜಕತ್ವ ಹಾಗೂ ಟೈಟಲ್ ಸ್ಪಾನ್ಸರ್ ಶಿಪ್ ಗಳು ಪ್ರತ್ಯೇಕವಾಗಿದ್ದು, ವಿಭಿನ್ನ ಹಕ್ಕುಗಳನ್ನು ಹೊಂದಿವೆ. ಐಪಿಎಲ್ ನ ಸೆಂಟ್ರಲ್ ಪ್ರಾಯೋಜಕತ್ವದಲ್ಲಿ ದೇಶಿ ಕಂಪನಿಗಳ ಪ್ರಾಬಲ್ಯವಿರುತ್ತದೆ. ಆದರೆ, ಆಟಗಾರರ ಬಟ್ಟೆ ಮೇಲಿನ ಹಕ್ಕುಗಳು ಕೇಂದ್ರ ಪ್ರಾಯೋಜಕತ್ವದ ಅಡಿ ಬರುವುದಿಲ್ಲ. ಅಂದರೆ ಜರ್ಸಿಯಲ್ಲಿ ಮುದ್ರಿಸಲಾದ ಲೋಗೋ ಟೈಟಲ್ ಪ್ರಾಯೋಜಕತ್ವದಕ್ಕೆ ಮಾತ್ರ ಹಕ್ಕಿದೆ.
41ನೇ ವಸಂತಕ್ಕೆ ಕಾಲಿಟ್ಟ ಎಂ.ಎಸ್ ಧೋನಿ
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ: ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಗೆ ಅವಕಾಶ ಇಲ್ವಂತೆ ಯಾಕೆ?
ಇಂಗ್ಲೆಂಡ್- ಭಾರತ ನಡುವೆ ಮರುನಿಗದಿ ಮಾಡಿದ್ದ 5 ನೇ ಟೆಸ್ಟ್ ಪಂದ್ಯ; ಇಂಗ್ಲೆಂಡ್ ಗೆ ಗೆಲುವು, ಸರಣಿ ಸಮಬಲ
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡದಿರುವ ನಿರ್ಧಾರ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ
ವಿಂಬಲ್ಡನ್ ಮಿಶ್ರ ಡಬಲ್ಸ್: ಸೆಮಿಫೈನಲ್ ತಲುಪಿದ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಜೋಡಿ
3000 ಮೀಟರ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಮಾಡಿದ ಅಥ್ಲಿಟ್ ಪಾರುಲ್ ಚೌಧರಿ