Connect with us


      




ದೇಶ

ಛತ್ತೀಸ್‌ಗಢ; 4 ನಕ್ಸಲರ ಶರಣಾಗತಿ

Kumara Raitha

Published

on

ಸುಕ್ಮಾ (ಛತ್ತೀಸ್‌ಗಢ), ಅ. 15 (ಯುಎನ್‌ಐ) ಎಡಪಂಥೀಯ ಉಗ್ರಗಾಮಿ ಗುಂಪುಗಳಿಂದ ಪೀಡಿತವಾಗಿರುವ ಬಸ್ತಾರ್ ವಿಭಾಗದ  ಅತ್ಯಂತ ಪ್ರಕ್ಷುಬ್ಧ ಜಿಲ್ಲೆಯಲ್ಲಿ ನಾಲ್ವರು ನಕ್ಸಲರು ಶರಣಾಗತರಾಗಿದ್ದಾರೆ. ಇವರಲ್ಲಿ ಓರ್ವ  ಮಾವೋವಾದಿ ಎಂದು ಹೇಳಲಾಗಿದೆ.

ಮಾವೋವಾದಿ ಭೀಮನಿಗೆ  ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಈತ
ಭೀಮಾ ಜಾಗರಗುಂದ ಪ್ರದೇಶದಲ್ಲಿ ಸಕ್ರಿಯನಾಗಿದ್ದ. ಉಳಿದವರನ್ನು ಛೋಟು, ಮೋಟು ಮತ್ತು ಜೋಗ ಎಂದು ಗುರುತಿಸಲಾಗಿದೆ.

ಈ ನಾಲ್ವರು ಬುಧವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ. ತಕ್ಷಣವೇ ಅವರಿಗೆ ತಲಾ 10,000 ರೂ.ಗಳನ್ನು  ಪ್ರೋತ್ಸಾಹಧನವಾಗಿ ನೀಡಲಾಯಿತು. ಇವರೆಲ್ಲರಿಗೂ ಸರ್ಕಾರದ ಪುನರ್ವಸತಿ ನೀತಿಯ ಅಡಿಯಲ್ಲಿ ಪ್ರಯೋಜನಗಳನ್ನು ದೊರಕಿಸುವ ಭರವಸೆ ನೀಡಲಾಗಿದೆ.

Share