Connect with us


      




ಸಾಮಾನ್ಯ

ವೇಗದ ಬೌಲರ್ ಉಮ್ರಾನ್ ಮಲಿಕ್ ದಾಖಲೆ; ಸಂಸದ ಶಶಿತರೂರ್ ಹೇಳಿದ್ದೇನು?

Lakshmi Vijaya

Published

on

ಮುಂಬೈ: ಏಪ್ರಿಲ್ 17 (ಯು.ಎನ್.ಐ.) ಕ್ರಿಕೆಟ್ ನಲ್ಲಿ ಬೌಲಿಂಗ್ ಕೌಶಲ್ಯ ತುಂಬಾ ಮುಖ್ಯ. ಅದರಲ್ಲೂ ಚುಟುಕು ಕ್ರಿಕೆಟ್ ಅಂತ ಕರೆಸಿಕೊಳ್ಳೋ ಐಪಿಎಲ್ ನಲ್ಲಂತೂ ಬೌಲಿಂಗ್ ಮಾಡುವುದು ಅತ್ಯಂತ ಸವಾಲಿನ ಕಾರ್ಯ. ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗ ಬೌಲಿಂಗ್ ನಲ್ಲಿ  ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ದಾಖಲೆ ಸೃಷ್ಟಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲೂ ಯಾವುದೇ ರನ್ ನೀಡದೇ ಮೂರು ವಿಕೆಟ್ ಪಡೆದ ಸಾಧನೆಯನ್ನ ಉಮ್ರಾನ್ ಮಲಿಕ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಉಮ್ರಾನ್ ಮಲಿಕ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಅತ್ಯಂತ ಪ್ರಭಾವಶಾಲಿ ಯುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಬೌಲಿಂಗ್ ವೇಗವು ಅತ್ಯಂತ ಅನುಭವಿ ಬ್ಯಾಟರ್‌ಗಳನ್ನು ಸಹ ದಿಗಿಲು ಬೀಳುವಂತೆ ಮಾಡಿದೆ.  ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ 4 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ, ನಾಲ್ಕು ವಿಕೆಟ್ ಕಿತ್ತರು. ಅದರಲ್ಲೂ ಕೊನೆಯ 20 ನೇ ಓವರ್ ನಲ್ಲಿ ಒಂದು ರನ್ ಕೂಡ ನೀಡದೇ 3 ವಿಕೆಟ್ ಕಿತ್ತು ಮೇಡನ್ ಓವರ್ ಮಾಡಿದರು. ಈ ಮೂಲಕ ಐಪಿಎಲ್ ನ ಕೊನೆಯ ಓವರ್ ನಲ್ಲಿ ಮೇಡನ್ ಎಸೆದ ನಾಲ್ಕನೇ ಬೌಲರ್ ಎಂಬ ಖ್ಯಾತಿಗೆ ಉಮ್ರಾನ್ ಮಲಿಕ್ ಪಾತ್ರರಾಗಿದ್ದಾರೆ.

ಈ ಮುನ್ನ 2008 ರಲ್ಲಿ ಇರ್ಫಾನ್ ಪಠಾಣ್, 2009 ರಲ್ಲಿ ಲಸಿತ್ ಮಾಲಿಂಗ ಮತ್ತು 2017 ರಲ್ಲಿ ಜಯದೇವ್ ಉನದ್ಕತ್  ಐಪಿಎಲ್ ಇನ್ನಿಂಗ್ಸ್ ನ ಅಂತಿಮ ಓವರ್‌ನಲ್ಲಿ ಮೇಡನ್ ಬೌಲ್ ಮಾಡಿದ ದಾಖಲೆಯಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಉಮ್ರಾನ್ ಮಲಿಕ್ ಆಟ ನೋಡಿ ಪ್ರಭಾವಿತರಾಗಿದ್ದಾರೆ. ಈತನನ್ನು ಶೀಘ್ರವೇ ಈತನನ್ನು ಟೀಂ ಇಂಡಿಯಾದ ಜೆರ್ಸಿಯಲ್ಲಿ ನೋಡಬೇಕು. ಅಸಾಧಾರಣ ಪ್ರತಿಭೆ ಎಂದು ಕೊಂಡಾಡಿದ್ದಾರೆ.

ಹಲವು ಕ್ರಿಕೆಟ್ ಅಭಿಮಾನಿಗಳು ಕೂಡ ಹೈದರಾಬಾದ್ ಸನ್ ರೈಸರ್ಸ್ ನ ಈ ವೇಗದ ಬೌಲರ್ ನ ಆಟಕ್ಕೆ ಕ್ಲೀನ್ ಬೋಲ್ಡ್ ಆಗಿದ್ದು ಈತನಿಗೆ ಬೇಗನೇ ಬ್ಲೂ ಜೆರ್ಸಿ ನೀಡಿ ಎಂದಿದ್ದಾರೆ.

Share