Connect with us


      




ರಾಜಕೀಯ

ಯುಪಿ ಮೊದಲ ಹಂತ ಚುನಾವಣೆ: ಸಂಜೆ 5 ರವರೆಗೆ ಶೇ. 57.79ರಷ್ಟು ಮತದಾನ

Vanitha Jain

Published

on

ಲಕ್ನೋ: ಫೆಬ್ರವರಿ 10 (ಯು.ಎನ್.ಐ.) ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಸಂಜೆ 5 ಗಂಟೆಯವರೆಗೆ ಶೇ. 57.79ರಷ್ಟು ಮತದಾನವಾಗಿದೆ.

ಸಂಜೆ ೩ ಗಂಟೆಯವರೆಗೆ 48.24ರಷ್ಟಾಗಿದ್ದ ಮತದಾನ ಸಂಜೆ 5 ಗಂಟೆಯ ವೇಳೆ ಅಂದರೆ ಎರಡು ಗಂಟೆಯ ಅಂತರದಲ್ಲಿ ಶೇ 9ರಷ್ಟು ಹೆಚ್ಚಳ ಕಂಡಿತ್ತು.

ಚುನಾವಣಾ ಆಯೋಗವು ಹೊರಡಿಸಿದ ಕೋವಿಡ್-ಸೂಕ್ತ ಮಾರ್ಗಸೂಚಿಗಳಿಗೆ ಬದ್ಧವಾಗಿ ಮತದಾನವು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6ಕ್ಕೆ ಮುಕ್ತಾಯವಾಯಿತು.

ಮೊದಲ ಹಂತದಲ್ಲಿ ಯುಪಿಯ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಹಂತದಲ್ಲಿ ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರು. ಮೊದಲ ಹಂತದಲ್ಲಿ ಜಾಟ್ ಪ್ರಾಬಲ್ಯದ ಪಶ್ಚಿಮ ಯುಪಿ ಪ್ರದೇಶ ಮತ್ತು ದೋಬ್ ನಲ್ಲಿ ಮತದಾನ ನಡೆಯಿತು.

ಗಾಜಿಯಾಬಾದ್ ನಲ್ಲಿ ಸಂಜೆ 5 ಗಂಟೆಯವರೆಗೆ 44.94% ಮತದಾನವಾಗಿದೆ, ಲೋನಿಯಲ್ಲಿ ಶೇ. 57.60ರಷ್ಟು, ಮುರಾದ್‌ನಗರದಲ್ಲಿ ಶೇ. 57.30 ರಷ್ಟು, ಸಾಹಿಬಾಬಾದ್ ನಲ್ಲಿ ಶೇ.45 ರಷ್ಟು, ಗಾಜಿಯಾಬಾದ್ ನಲ್ಲಿ ಶೇ. 50.40 ರಷ್ಟು, ಮೋದಿನಗರದಲ್ಲಿ ಶೇ. 63.53 ರಷ್ಟು, ಧೌಲಾನಾದಲ್ಲಿ (ಭಾಗಶಃ) ಶೇ.58ರಷ್ಟು ಮತದಾನವಾಗಿದೆ.

Share