Published
6 months agoon
ಹೊಸದಿಲ್ಲಿ : ಜನೆವರಿ 10 (ಯು.ಎನ್.ಐ.) ವೆಂಟಿಲೇಟರ್, ಆಸ್ಪತ್ರೆ, ಆಮ್ಲಜನಕ, ಹಾಸಿಗೆ, ಕಟ್ಟಡಗಳನ್ನು ಸರ್ಕಾರ ಹಣ ಕೊಟ್ಟು ಖರೀದಿ ಮಾಡಬಹುದು. ಆದರೆ, ವೈದ್ಯರನ್ನು ಖರೀದಿಸಲು ಸಾಧ್ಯವಿಲ್ಲ. ರೆಸಿಡೆಂಟ್ ಡಾಕ್ಟರ್ ಆಗಲು ಒಂದು ದಶಕ ಬೇಕು. ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ 700-800 ವೈದ್ಯರಲ್ಲಿ ನಾನೂ ಒಬ್ಬ ಎಂದು ದೆಹಲಿಯ ಇಎಸ್ಐ ಆಸ್ಪತ್ರೆಯ ವೈದ್ಯ ವೈದ್ಯ ರೋಹನ್ ಕೃಷ್ಣನ್ ಹೇಳಿದ್ದಾರೆ. ನಮಗೆ ಕೇವಲ 7 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿದೆ. ಬಳಿಕ, ಯಾವುದೇ ಪರೀಕ್ಷೆಯಿಲ್ಲದೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ವೈದ್ಯರು ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯ ವ್ಯವಸ್ಥೆ ಸದೃಢವಾಗಿರುತ್ತದೆ ಎಂದು ವೈದ್ಯ ರೋಹನ್ ಕೃಷ್ಣನ್ ನೋವು ತೋಡಿಕೊಂಡಿದ್ದಾರೆ.
ರೋಹನ್ ಪ್ರಸ್ತುತ ಕೋವಿಡ್ ಪಾಸಿಟಿವ್ ಆಗಿದ್ದು, ರೋಹನ್ ಅವರಂತೆಯೇ ದೆಹಲಿಯ ಆಸ್ಪತ್ರೆಯ ವೈದ್ಯರಲ್ಲಿ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದೆ. ದೆಹಲಿಯ 5 ಪ್ರಮುಖ ಆಸ್ಪತ್ರೆಗಳ 800 ಕ್ಕೂ ಹೆಚ್ಚು ವೈದ್ಯರು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ವೈದ್ಯರೊಂದಿಗೆ ಸಂಪರ್ಕಕ್ಕೆ ಬಂದ ಇತರೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕೂಡ ಐಸೋಲೇಟ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಸೋಂಕಿತರಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ನಿತ್ಯ ತಪಾಸಣೆ, ಒಪಿಡಿ ಹಾಗೂ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಗುತ್ತಿದೆ.
ದೆಹಲಿ ಆಸ್ಪತ್ರೆಗಳ ಪೈಕಿ ಏಮ್ಸ್ ಕೆಟ್ಟ ಸ್ಥಿತಿ ಎದುರಿಸುತ್ತಿದೆ. ಏಮ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 350 ವೈದ್ಯರು ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಖ್ಯೆ ಕೇವಲ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ವೈದ್ಯರದ್ದಾಗಿದೆ. ಆಸ್ಪತ್ರೆಯ ಅಧ್ಯಾಪಕರು, ಅರೆವೈದ್ಯಕೀಯ ಸಿಬ್ಬಂದಿಯನ್ನು ಸೇರಿಸಿದರೆ ಈ ಸಂಖ್ಯೆ ತುಂಬಾ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸುಮಾರು 80-100 ವೈದ್ಯರು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ 100 ಕ್ಕೂ ಹೆಚ್ಚು ವೈದ್ಯರು, ಲೋಕನಾಯಕ ಆಸ್ಪತ್ರೆಯ 50-70 ವೈದ್ಯರು ಮತ್ತು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ 150 ವೈದ್ಯರು ಕೋವಿಡ್ ಗೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಆಸ್ಪತ್ರೆಗಳಲ್ಲಿ ಕೊರೊನಾದಿಂದ ರಕ್ಷಣೆ ಪಡೆಯಲು ವೈದ್ಯರಿಗೆ ಸರಿಯಾದ ಸಮಯದಲ್ಲಿ ಪಿಪಿಇ ಕಿಟ್ಗಳು, ರಕ್ಷಣಾತ್ಮಕ ಗೇರ್ಗಳು, ಎನ್95 ಮಾಸ್ಕ್ಗಳ ದೊರೆಯುತ್ತಿಲ್ಲ ಎಂಬುದು ತಿಳಿದುಬಂದಿದೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು!
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ: ಉನ್ನತ ಸಭೆ ಕರೆದ ಕೇಂದ್ರ ಆರೋಗ್ಯ ಸಚಿವ
ದೆಹಲಿಯಲ್ಲಿ 1,118 ಕೋವಿಡ್ ಕೇಸ್; ನಿನ್ನೆಗಿಂತ 82% ಹೆಚ್ಚು!
ಪ್ರಿಯಾಂಕ ವಾದ್ರಾಗೂ ಕೊರೊನಾ ಸೋಂಕು
ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ
ಕೋವಿಡ್ ಸಾವಿನ ಸಂಖ್ಯೆಯಲ್ಲಿ ಕೇಂದ್ರ ಸುಳ್ಳು ಹೇಳಿದೆ: ದಿನೇಶ್ ಗುಂಡೂರಾವ್