Published
4 months agoon
ಪ್ಯಾರಿಸ್: ಜನೆವರಿ 27 (ಯು.ಎನ್.ಐ.) ಉಕ್ರೇನ್ ಮತ್ತು ರಷ್ಯಾ ನಡುವೆ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಪರಿಹಾರದ ಸುದ್ದಿ ಬಂದಿದೆ. ಬುಧವಾರ ಪ್ಯಾರಿಸ್ನಲ್ಲಿ ಎಂಟು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲಾ ಪಕ್ಷಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಇದಲ್ಲದೆ, 2019ರ ಬಳಿಕ ಉಕ್ರೇನ್ ಮತ್ತು ರಷ್ಯಾ ಮೊದಲ ಬಾರಿಗೆ ಉಕ್ರೇನಿಯನ್ ಪಡೆಗಳು ಮತ್ತು ಪ್ರತ್ಯೇಕತಾವಾದಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆ ಜಂಟಿ ಹೇಳಿಕೆ ನೀಡಲು ಒಪ್ಪಿಕೊಂಡಿವೆ. ಈ ಕದನ ವಿರಾಮದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ಪ್ರಮುಖ ಪಾತ್ರ ವಹಿಸಿವೆ.
ಎರಡೂ ಕಡೆಯವರು ಬೇಷರತ್ತಾದ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದು, ಎರಡು ವಾರಗಳ ನಂತರ ಬರ್ಲಿನ್ನಲ್ಲಿ ಇದೇ ವಿಷಯದ ಕುರಿತು ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಸೀಜ್ ಫೈರ್ ಅನ್ನು ಫ್ರಾನ್ಸ್ ಸ್ವಾಗತಿಸಿದ್ದು, ನಿರಂತರವಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಸಕಾರಾತ್ಮಕ ವಿಚಾರಗಳು ಹೊರಹೊಮ್ಮಿವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸಹಾಯಕ ತಿಳಿಸಿದ್ದಾರೆ.
ರಷ್ಯಾದ ರಾಜತಾಂತ್ರಿಕ ಡಿಮಿಟ್ರಿ ಕೊಜಾಕ್ ಅವರು ಅನೇಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪೂರ್ವ ಉಕ್ರೇನ್ನಲ್ಲಿ ಕದನ ವಿರಾಮವನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು. ಎರಡು ವಾರಗಳ ನಂತರ ಬರ್ಲಿನ್ ಸಭೆಯಲ್ಲಿ ಪ್ಯಾರಿಸ್ನಂತೆ ಎರಡೂ ದೇಶಗಳ ರಾಜತಾಂತ್ರಿಕರು ಭಾಗವಹಿಸಲಿದ್ದಾರೆ. ಈ ಸಭೆಗಳಲ್ಲಿ ರಾಷ್ಟ್ರಗಳ ಮುಖ್ಯಸ್ಥರನ್ನು ಒಳಗೊಳ್ಳುವುದು ಅಜೆಂಡಾದಲ್ಲಿಲ್ಲ ಎಂದು ಜಂಟಿಯಲ್ಲಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪುಟಿನ್ ಪ್ರವೇಶಕ್ಕೆ ನಿಷೇಧ ಹೇರಿದ ಕೆನಡಾ!
ಕಾನ್ ಚಲನಚಿತ್ರೋತ್ಸವ ; ಫ್ರಾನ್ಸ್ ಗೆ ಹಾರಿದ “ಕಾನ್ಸ್ ಬೇಬಿ” ಪೂಜಾ ಹೆಗ್ಡೆ
ಪ್ಯಾರಿಸ್ನ ಟರ್ಕಿಯ ರಾಯಭಾರಿ ಕಚೇರಿ ಸಿಬ್ಬಂದಿ ಮೇಲೆ ದಾಳಿ!
$40 ಶತಕೋಟಿ ಉಕ್ರೇನ್ ಹಣಕಾಸು ನೆರವು ಮಸೂದೆ ಅಮೆರಿಕದಲ್ಲಿ ಅಂಗೀಕಾರ
ಪುಟಿನ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಯ್ತಾ? ಆ ಫೋಟೋದಲ್ಲಿರೋದೇನು?
40 ರಷ್ಯನ್ನರ ಮೇಲೆ ನಿರ್ಬಂಧ ವಿಧಿಸಿದ ಕೆನಡಾ