Connect with us


      




ದೇಶ

2024 ಚುನಾವಣೆ ಮೇಲೆ ಬಿಜೆಪಿ ಕಣ್ಣು: ಯೋಗಿ ಕ್ಯಾಬಿನೆಟ್ ನಲ್ಲಿ 9 ದಲಿತರು, 20 ಒಬಿಸಿಗಳಿಗೆ ಪ್ರಾಧಾನ್ಯತೆ

Vanitha Jain

Published

on

ಲಕ್ನೋ: ಮಾರ್ಚ್ 26 (ಯು.ಎನ್.ಐ.) ಭಾರತೀಯ ಜನತಾ ಪಕ್ಷವು ಐತಿಹಾಸಿಕ ಚುನಾವಣಾ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಯೋಗಿ ಆದಿತ್ಯನಾಥ್ ಕೂಡ ಸತತ ಎರಡನೇ ಅವಧಿಗೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. 37 ವರ್ಷಗಳಲ್ಲಿ ಮೊದಲನೆ ಬಾರಿ ಈ ಸಂದರ್ಭ ಸೃಷ್ಟಿಯಾಗಿದೆ.

ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಹಿರಿಯ ರಾಜಕಾರಣಿಗಳು ಸೇರಿದಂತೆ 85,000 ಜನರು ಭಾಗವಹಿಸಿದ್ದ ಸಮಾರಂಭದಲ್ಲಿ 52 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ 18 ಮಂದಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ ಮತ್ತು 14 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 20 ಕಿರಿಯ ಮಂತ್ರಿಗಳು. ಪಕ್ಷವು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ, ಮುಸ್ಲಿಮರು ಮತ್ತು ಸಿಖ್ ಸಮುದಾಯದ ನಾಯಕರಿಗೂ ಸ್ಥಾನಗಳನ್ನು ಎಚ್ಚರಿಕೆಯಿಂದ ಹಂಚಿದೆ.

ಯೋಗಿ ಆದಿತ್ಯನಾಥ್ ಅವರ ಸಚಿವ ಸಂಪುಟ ಮುಖ್ಯಮಂತ್ರಿ ಸೇರಿ 21 ಮಂದಿ ಮೇಲ್ಜಾತಿಯಿಂದ ಬಂದವರು, 20 ಇತರೆ ಹಿಂದುಳಿದ ವರ್ಗಗಳಿಂದ (ಒಬಿಸಿ) ಮತ್ತು ಒಂಬತ್ತು ದಲಿತರು, ಮುಸ್ಲಿಂ, ಸಿಖ್ ಮತ್ತು ಪಂಜಾಬಿ ಸಮುದಾಯದವರಿಂದ ತಲಾ ಒಬ್ಬರು ಸಚಿವರಿದ್ದಾರೆ. ಜೊತೆಗೆ ಯಾದವರಿಗೂ ಪ್ರಾಧಾನ್ಯತೆ ನೀಡಲಾಗಿದೆ.

Share