Connect with us


      
ವಿದೇಶ

ಸ್ಪೇನ್ ನಲ್ಲಿ ಕೊರೊನಾದಿಂದ ಸುಮಾರು 90 ಸಾವಿರ ಸೋಂಕಿತರು ಸಾವು

UNI Kannada

Published

on

ಮ್ಯಾಡ್ರಿಡ್ : ಜನೆವರಿ 11  (ಯು.ಎನ್.ಐ.) ಸ್ಪೇನ್‌ನಲ್ಲಿ ಕೊರೊನಾ ರುಧ್ರತಾಂಡವ ಆಡುತ್ತಿದೆ. ದಕ್ಷಿಣ ಯುರೋಪಿಯನ್ ಖಂಡದ ಸ್ಪೇನ್ ನಲ್ಲಿ ಕೊರೊನಾ ಸಾವಿನ ಸಂಖ್ಯೆ 90,000ಕ್ಕೆ ತಲುಪಿದೆ ಎಂದು ಸ್ಪ್ಯಾನಿಷ್ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೊರೊನಾದೊಂದಿಗೆ ಒಮೈಕ್ರಾನ್ ಹಾವಳಿ ಹೆಚ್ಚಾಗಿದ್ದು, ಅಪಾರ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಕೇವಲ ಮೂರು ದಿನಗಳಲ್ಲಿ 202 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸ್ಪೇನ್‌ನಲ್ಲಿ ಇದುವರೆಗೆ 74,57,300 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 72 ಗಂಟೆಗಳಲ್ಲಿ 2,92,394 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಶೇಖಡಾ 23.58 ರಷ್ಟು ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇಖಡಾ 13.4ರಷ್ಟು ಸಂತ್ರಸ್ತರಿಗೆ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸ್ಪ್ಯಾನಿಷ್ ಸರ್ಕಾರವು 5 ರಿಂದ 16 ವರ್ಷದೊಳಗಿನ 33,50,000 ಜನರಿಗೆ ಕೊರೊನಾ ಲಸಿಕೆಯನ್ನು ಹಾಕಿದೆ ಎಂದು ಪ್ರಧಾನಿ ಪೆಡ್ರೊ ಸ್ಚಾಂಚೆಜ್ ಹೇಳಿದ್ದಾರೆ. ಕೊರೊನಾ ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Share