Connect with us


      




ರಾಜಕೀಯ

ಬಡವರ ಕೊರಳಿಗೆ ನೇಣು ಕುಣಿಕೆ ಹಾಕ್ತೀರ : ಚಂದ್ರಬಾಬು ನಾಯ್ಡು.

UNI Kannada

Published

on

ಅಮರಾವತಿ: ಜಗನ್ ಸಂಪೂರ್ಣ ಗೃಹಹಕ್ಕು ಯೋಜನೆ ಹೆಸರಿನಲ್ಲಿ  ರಾಜ್ಯದ ಜನತೆಯನ್ನು ಮೋಸ ಮಾಡುತ್ತಿದ್ದಾರೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡೂ ಆರೋಪಿಸಿದ್ದಾರೆ. ಒಟಿಎಸ್ ಹೆಸರಿನಲ್ಲಿ ಬಡವರ ಕೊರಳಿಗೆ ನೇಣು ಕುಣಿಕೆ ಹಾಕ್ತೀರ? ಎಂದು ಪ್ರಶ್ನಿಸಿದರು.

ಮಂಗಳಗಿರಿಯಲ್ಲಿರುವ ಟಿಡಿಪಿ ಕೇಂದ್ರ ಕಛೇರಿಯಲ್ಲಿ ಅಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು. ಮಾತು ತಪ್ಪುವುದು ಜಗನ್ ಮೋಹನ್ ರೆಡ್ಡಿಗೆ ಅಭ್ಯಾಸವೆಂದು ವ್ಯಂಗ್ಯ ವಾಡಿದರು.

ಮನೆಗಳ ಮೇಲಿರುವ ಬಾಕಿ ಮೊತ್ತವನ್ನು ಮನ್ನಾ ಮಾಡುವುದಾಗಿ ಚುನಾವಣೆ ಪ್ರಚಾರದ ಸಮಯದಲ್ಲಿ ಭರವಸೆ ಕೊಟ್ಟು ಈಗ ಮಾತು ತಪ್ಪಿದ್ದಾರೆ. ಚಿಕಿತ್ಸೆಗೆಂದು ಮೀಸಲಿಟ್ಟ ಹಣವನ್ನ ಒಟಿಎಸ್ ಗಾಗಿ ವಸೂಲಿ ಮಾಡ್ತೀರ ? ಬೊಬ್ಬಿಲಿ ಪ್ರದೇಶದಲ್ಲಿರುವ ಒಟಿಎಸ್ನಿಂದ ನೊಂದ ಕುಟುಂಬಕ್ಕೆ ಆಸರೆಯಾಗಿ ಟಿಡಿಪಿ ಪಕ್ಷ ಇದೆ , ಆ ಬಾಲಕನ ಚಿಕಿತ್ಸೆಯ ವೆಚ್ಚವನ್ನು ಟಿಡಿಪಿ ಭರಿಸಲಿದೆ ಎಂದರು.

ಪುಲಿಚಿಂತಲ ಪ್ರಾಜೆಕ್ಟ್ ಗಾಗಿ ಭೂಮಿಯನ್ನು ಕೊಟ್ಟು ಪುನರ್ವಸತಿ ಭಾಗವಾಗಿ ಮನೆ ಪಡೆದುಕೊಂಡ ಬಡವರಿಂದ ಒಟಿಎಸ್  ವಸೂಲಿ ಮಾಡ್ತೀರ? ಗ್ರಾಮಪಂಚಾಯ್ತಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇಷ್ಟ ಬಂದಂತೆ ರಿಜಿಸ್ಟ್ರೇಷನ್ ಮಾಡ್ತೀರ? ಈ ಸಿಎಂ ಭೂಮಿ ನೀಡಿದ್ದಾರ ?ನಿರ್ಮಾಣ ಕೆಲಸಕ್ಕೆ ಹಣ ನೀಡಿದ್ದಾರ ? ಎನ್ ಟಿ ಆರ್ ಕಟ್ಟಿಸಿದ್ದ ಮನೆಗಳಿಗೆ ಈಗ ಹಣ ವಸೂಲು ಮಾಡುವುದು ಯಾವ ನ್ಯಾಯ ? ಒಟಿಎಸ್ ಕಟ್ಟಲೇ ಬೇಕೆಂದು ಪಟ್ಟು ಹಿಡಿದು ಪ್ರಜೆಗಳಿಗೆ ಒತ್ತಡ ಏರುವುದು ಸರಿಯಲ್ಲ ಎಂದು ಆಗ್ರಹಿಸಿದರು.

Share