Connect with us


      
ವಿದೇಶ

9/11 ದಾಳಿಯ ಮಾಸ್ಟರ್ ಮೈಂಡ್ ನನ್ನು ಹೊಡೆದುರುಳಿಸಿದ ಅಮೆರಿಕ

Lakshmi Vijaya

Published

on

ಕಾಬೂಲ್ : ಆಗಸ್ಟ್ 02 (ಯು.ಎನ್.ಐ.) 9/11 ದಾಳಿಯ ಮಾಸ್ಟರ್ ಮೈಂಡ್ ನನ್ನು ಅಮೆರಿಕ ಹೊಡೆದುರುಳಿಸಿದೆ.  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಯಶಸ್ವಿ ಡ್ರೋನ್ ದಾಳಿಯ ನಂತರ ಯುನೈಟೆಡ್ ಸ್ಟೇಟ್ಸ್ ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದು ಹಾಕಿದೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್ ಮಂಗಳವಾರ ಬೆಳಗ್ಗೆ ದೂರದರ್ಶನ ಭಾಷಣದಲ್ಲಿ ಮಾತನಾಡಿ ಈ ಬಗ್ಗೆ ಖಚಿತಪಡಿಸಿದರು. 9/11 ರಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊಲ್ಲಲ್ಪಟ್ಟ 3,000 ಜನರ ಕುಟುಂಬಗಳಿಗೆ ನ್ಯಾಯವನ್ನು ನೀಡಲಾಗಿದೆ  ಎಂದು ಹೇಳಿದರು.  ಅಲ್-ಖೈದಾ ನಾಯಕ ಸೆಪ್ಟೆಂಬರ್ 11, 2001 ರ ದಾಳಿಯ ಮಾಸ್ಟರ್ ಮೈಂಡ್ ಮತ್ತು ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದನು.

2011 ರಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಹತ್ಯೆ ನಂತರ ಇದು ಭಯೋತ್ಪಾದಕ ಗುಂಪಿಗೆ ದೊಡ್ಡ ಹೊಡೆತವಾಗಿದೆ. 2011 ರಲ್ಲಿ ಬಿನ್ ಲಾಡೆನ್ ನಂತರ, ಜವಾಹಿರಿ ಅಲ್ ಖೈದಾವನ್ನು ಮುನ್ನಡೆಸುತ್ತಿದ್ದರು. ಆದ್ದರಿಂದ ಜವಾಹಿರಿಯ ಹತ್ಯೆಯೊಂದಿಗೆ, ಭಯೋತ್ಪಾದಕ ಗುಂಪು ತೀವ್ರ ಉತ್ತರಾಧಿಕಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಿಡಲ್ ಈಸ್ಟ್ ಇನ್‌ಸ್ಟಿಟ್ಯೂಟ್ ಪ್ರಕಾರ, ಸೈಫ್ ಅಲ್-ಅಡೆಲ್ ಚುಕ್ಕಾಣಿ ಹಿಡಿಯಲು ಮುಂದಿನ ಸಾಲಿನಲ್ಲಿದ್ದಾರೆ.

ವಾರಾಂತ್ಯದಲ್ಲಿ ಕಾಬೂಲ್‌ನ ನಿವಾಸದ ಮೇಲೆ ಯುನೈಟೆಡ್ ಸ್ಟೇಟ್ಸ್ ಡ್ರೋನ್ ದಾಳಿ ನಡೆಸಿದೆ ಎಂದು ತಾಲಿಬಾನ್‌ನ ಮುಖ್ಯ ವಕ್ತಾರರು ತಿಳಿಸಿದ್ದಾರೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ಭಾನುವಾರ ದಾಳಿ ನಡೆದಿದೆ ಮತ್ತು ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು 2020 ರ ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳುವ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆರಿಕಾ ದಾಳಿಯನ್ನು ಖಂಡಿಸಿದರು.

Continue Reading
Click to comment

Leave a Reply

Your email address will not be published.

Share