Connect with us


      
ರಾಜಕೀಯ

ರಾಜ್ ಠಾಕ್ರೆ ‘ಧ್ವನಿವರ್ಧಕ’ಕ್ಕೆ ಸಚಿವ ಆದಿತ್ಯ ಠಾಕ್ರೆ ‘ಬೆಲೆ’

Lakshmi Vijaya

Published

on

ಮುಂಬೈ: ಏಪ್ರಿಲ್ 16 (ಯು.ಎನ್.ಐ.) ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ರಾಜ್ ಠಾಕ್ರೆ ಎಚ್ಚರಿಕೆಯನ್ನ ಸ್ವಾಗತಿಸಿರುವ ಸಚಿವ ಆದಿತ್ಯ ಠಾಕ್ರೆ ಒಳ್ಳೆಯದು, ಹಾಗೇ ಮಾಡಲಿ. ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿ ಅದನ್ನು ಏರುತ್ತಿರುವ ಹಣದುಬ್ಬರದ ಬಗ್ಗೆ ಮಾತನಾಡಲು ಬಳಸಲಿ. ದಿನೇ ದಿನೇ ಹೆಚ್ಚುತ್ತಿರೋ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೆಲೆಗಳ ಹೆಚ್ಚಳದ ಬಗ್ಗೆ ಮಾತನಾಡಬೇಕು. 60 ವರ್ಷ ಹಿಂದೆ ಹೋಗದೆ ಕಳೆದ ಎರಡು ಮೂರು ವರ್ಷಗಳಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತನಾಡೋಣ ಎಂದು ತಮ್ಮ ಚಿಕ್ಕಪ್ಪ, ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ತಿರುಗೇಟು ನೀಡಿದರು.

ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಇತ್ತೀಚಿಗೆ ಮಾತನಾಡಿದ ರಾಜ್ ಠಾಕ್ರೆ ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು, ಇಲ್ಲದಿದ್ದರೆ ತಮ್ಮ ಪಕ್ಷದ ಕಾರ್ಯಕರ್ತರು ಮಸೀದಿಯ ಹೊರಗೆ ಸ್ಪೀಕರ್‌ಗಳನ್ನು ಅಳವಡಿಸಿ ಅದರಲ್ಲಿ ಹನುಮಾನ್ ಚಾಲೀಸಾ ಕೇಳಿಸುತ್ತಾರೆ ಎಂದಿದ್ರು. ಈ ಸವಾಲು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಕಿಡಿ ಹೊತ್ತಿಸಿದೆ.

Share