Connect with us


      




ದೇಶ

ಗೋವಾ ಚುನಾವಣೆ: ಆಮ್ ಆದ್ಮಿ ಪಕ್ಷ ಗೆದ್ದರೆ ಎಸ್ ಟಿ ಸಮುದಾಯಕ್ಕೆ ವಿಧಾನಸಭೆಯಲ್ಲಿ ಶೇ.12.5 ಮೀಸಲಾತಿ: ಕೇಜ್ರಿವಾಲ್

Vanitha Jain

Published

on

ಪಣಜಿ: ಫೆಬ್ರವರಿ 04 (ಯು.ಎನ್.ಐ.) ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಗೋವಾದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಓಲೈಕೆಗಾಗಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ವಿಧಾನಸಭೆಯಲ್ಲಿ ಶೇ.12.5 ಮೀಸಲಾತಿ ಸೇರಿದಂತೆ ಎಂಟು ಭರವಸೆಗಳನ್ನು ಈಡೇರಿಸುವುದಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆಶ್ವಾಸನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗೋವಾದ ಹಿಂದಿನ ಸರಕಾರಗಳು ಗೋವಾದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಗಳನ್ನು ನಿರ್ಲಕ್ಷಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿವೆ. ಆಮ್ ಆದ್ಮಿ ಪಕ್ಷವು ಇಂದು ಸಮುದಾಯಕ್ಕೆ ಎಂಟು ಭರವಸೆಗಳನ್ನು ಘೋಷಿಸಲಿದೆ ಎಂದು ಹೇಳಿದರು.

ಬುಡಕಟ್ಟು ಸಮುದಾಯಗಳಿಗಾಗಿ ಬುಡಕಟ್ಟು ಉಪ ಯೋಜನೆ ಬಜೆಟ್ ಮಂಡನೆ, ತುರ್ತು ಆಧಾರದ ಮೇಲೆ 3,000 ಖಾಲಿ ಹುದ್ದೆಗಳನ್ನು ಎಸ್‌ಟಿಗಳಿಗೆ ಮೀಸಲು, ಅರಣ್ಯ ಹಕ್ಕು ಕಾಯಿದೆ ಜಾರಿ, ವಿಧಾನಸಭೆಯಲ್ಲಿ ಶೇ.12.5 ಮೀಸಲಾತಿ, ಉಚಿತ ಆರೋಗ್ಯ ಸೇವೆ, ಬಾಲ್ಯದಿಂದ ಪದವಿಯವರೆಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮಾಸಿಕ 1,000 ರೂ, ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ ಈ ಎಂಟು ಭರವಸೆಗಳನ್ನು ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ಜೊತೆಗಿನ ಮೈತ್ರಿ ಸಂಬಂಧ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದರೆ ಯೋಚಿಸಬಹುದು, ಆದರೆ ಅವರು ೨೪ ಗಂಟೆಯೊಳಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

Share