Connect with us


      




ದೇಶ

300 ವರ್ಷಗಳ ದೇವಾಲಯ ಕೆಡವಲು ಕೇಂದ್ರ ಹೊರಡಿಸಿದ ಆದೇಶ ಪತ್ರ ಬಹಿರಂಗ

Vanitha Jain

Published

on

ಜೈಪುರ: ಏಪ್ರಿಲ್ 23 (ಯು.ಎನ್.ಐ.) ರಾಜಸ್ಥಾನದ ಅಲ್ವಾರ್ ನಲ್ಲಿ 300 ವರ್ಷಗಳಷ್ಟು ಹಳೆಯದಾದ ದೇವಾಲಯ ನೆಲಸಮಗೊಳಿಸುವ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ದೆಹಲಿಯ ಶ್ರೀನಿವಾಸಪುರಿ ಪ್ರದೇಶದಲ್ಲಿ ದೇವಾಲಯವನ್ನು ಕೆಡವಲು ಕೇಂದ್ರ ಸರ್ಕಾರ ಹೊರಡಿಸಿದ ಆದೇಶ ಪತ್ರವನ್ನು ಹಂಚಿಕೊಂಡಿದ್ದಾರೆ.

ಯಾವುದೇ ಅನುಮತಿಯಿಲ್ಲದೆ ಸರ್ಕಾರಿ ಭೂಮಿಯಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಏಳು ದಿನಗಳೊಳಗೆ ಭೂಮಿಯನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಕಟ್ಟಡವನ್ನು ನೆಲಸಮಗೊಳಿಸಲಾಗುವುದು ಎಂದು ಪತ್ರದಲ್ಲಿ ಆದೇಶಿಸಲಾಗಿದೆ..

ಒಮ್ಮತಕ್ಕೆ ಬಂದ ನಂತರ ದೇವಾಲಯವನ್ನು ಕೆಡವುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ.6ರಂದು ಎಲ್ಲ ಅತಿಕ್ರಮಣದಾರರಿಗೆ ಖುದ್ದಾಗಿ ನೋಟಿಸ್ ನೀಡಲಾಗಿದೆ ಎಂದು ಆಳ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದೆ.

ಅತಿಕ್ರಮಣ ತೆರವು ಸಂದರ್ಭದಲ್ಲಿ ಮೊದಲೇ ನಿರ್ಮಿಸಿದ್ದ ಮೂರು ದೇವಾಲಯಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ದೇವಾಲಯವೂ ಒಂದು. ಒತ್ತುವರಿ ತೆರವು ಮಾಡುವ ಮುನ್ನ ಖಾಸಗಿ ದೇವಸ್ಥಾನದಲ್ಲಿ ನಿರ್ಮಿಸಿರುವ ಮೂರ್ತಿಗಳನ್ನು ನಿರ್ಮಾತೃಗಳೇ ತೆಗೆದಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಂದಿರ ಧ್ವಂಸ ಕುರಿತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನೋಟಿಸ್ ವಿರೋಧಿಸಿ ಆಪ್ ಶಾಸಕರಾದ ಅತಿಶಿ ಮತ್ತು ಮದನ್ ಲಾಲ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Share