Connect with us


      
ಅಪರಾಧ

ಎಸಿಬಿ ಬಲೆಗೆ ಬಿದ್ದ ವಿದ್ಯುತ್‌ ಇಲಾಖೆ ತಂತ್ರಜ್ಞ

Kumara Raitha

Published

on

ಔರಂಗಾಬಾದ್:  ಫೆಬ್ರವರಿ  11 (ಯುಎನ್‌ಐ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಔರಂಗಾಬಾದ್ ಘಟಕವು ಶುಕ್ರವಾರ ಜಿಲ್ಲೆಯ ವಾಲೂಜ್ ಯುನಿಟ್-2 ಕ್ಕೆ ಸೇರ್ಪಡೆ ಮಾಡಲಾಗಿರುವ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್‌ನ (ಎಂಎಸ್‌ಇಡಿಸಿಎಲ್) ತಂತ್ರಜ್ಞನನ್ನು ಬಂಧಿಸಿದೆ.

ನಿನ್ನೆ ತಡರಾತ್ರಿ ಎಸಿಬಿ ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ತಂತ್ರಜ್ಞ ಸಚಿನ್ ಕಡುಬ ಪಡಲೆ (28) ದೂರುದಾರರ ಸಜಾಪುರದ  ನಿವಾಸಕ್ಕೆ ಹೊಸ ವಿದ್ಯುತ್ ಮೀಟರ್ ಅಳವಡಿಸಲು 20,000 ರೂಪಾಯಿ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.

ಅಧಿಕಾರಿ ಲಂಚಕ್ಕಾಗಿ ಪೀಡಿಸುತ್ತಿದ್ದ ವಿಚಾರವನ್ನು ದೂರುದಾರರು ಫೆಬ್ರವರಿ 9 ರಂದು  ಎಸಿಬಿ ಕಚೇರಿಯಲ್ಲಿ   ದಾಖಲಿಸಿದ್ದರು. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಎಸಿಬಿ ತಂಡ ನಿನ್ನೆ ರಾತ್ರಿ ದೂರುದಾರರ ನಿವಾಸದ ಮುಂದೆ ಬಲೆ ಬೀಸಿ  ಬಂಧನ ಕಾರ್ಯಾಚರಣೆ ನಡೆಸಿದೆ.

ಬಂಧಿತ ಅಧಿಕಾರಿವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 12, 13(1)(ಡಿ), 13(2) ಅಡಿಯಲ್ಲಿ ಎಂಐಡಿಸಿ ವಾಲೂಜ್ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Share