Connect with us


      
ರಾಜಕೀಯ

ಶರದ್ ಪವಾರ್ ವಿರುದ್ಧ ಪೋಸ್ಟ್; ಸಿನಿಮಾ ನಟಿಗೆ ನ್ಯಾಯಾಂಗ ಬಂಧನ

Lakshmi Vijaya

Published

on

ಥಾಣೆ: ಮೇ 18 (ಯು.ಎನ್.ಐ.) ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಬಂಧಿತರಾಗಿರುವ ಮರಾಠಿ ನಟ ಕೇತಕಿ ಚಿತಾಳೆ ಅವರನ್ನು ಮಹಾರಾಷ್ಟ್ರದ ನ್ಯಾಯಾಲಯವು ಜೂನ್ 1 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ

ಚಲನಚಿತ್ರ ಮತ್ತು ಕಿರುತೆರೆ ನಟಿ ಚಿತಾಳೆ ಅವರನ್ನು ಕಳೆದ ಶನಿವಾರ ಥಾಣೆ ಪೊಲೀಸರು ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ಪೋಸ್ಟ್ ಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. “ನರಕ ಕಾಯುತ್ತಿದೆ” ಮತ್ತು “ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ” ಎಂಬಂತಹ ಸಾಲುಗಳೊಂದಿಗೆ ಶರದ್ ಪವಾರ್ ಅವರನ್ನು ಗುರಿಯಾಗಿಟ್ಟುಕೊಂಡು ನಟಿ ಪೋಸ್ಟ್ ಹಂಚಿಕೊಂಡಿದ್ರು ಎಂಬ ಆರೋಪವಿದೆ.

ಬುಧವಾರ  ಥಾಣೆ ಅಪರಾಧ ವಿಭಾಗದ ಅಧಿಕಾರಿಗಳು ನಟಿಯನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಅವರು ಅವಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಿದರು.ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಪುಣೆ ಸೈಬರ್ ಪೊಲೀಸರೂ ಸಹ  ಚಿತಾಳೆ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು  ಥಾಣೆ ಪೊಲೀಸರೊಂದಿಗೆ ಅವರ ಬಂಧನ ಅವಧಿ ಮುಗಿದ ನಂತರ ಅವರು ನಟಿಯನ್ನ ಕಸ್ಟಡಿಗೆ ಕೋರುವುದಾಗಿ ಹೇಳಿದ್ದಾರೆ.ಈ ಹಿಂದೆ ಆನ್‌ಲೈನ್ ಪೋಸ್ಟ್ ಗೆ  ಸಂಬಂಧಿಸಿದಂತೆ ನಟಿಯ ವಿರುದ್ಧ ಮುಂಬೈ, ಅಕೋಲಾ ಮತ್ತು ಧುಲೆ ಜಿಲ್ಲೆಗಳಲ್ಲಿ  ಪ್ರಕರಣಗಳು ದಾಖಲಾಗಿದ್ದವು.

ಈ ಪೊಲೀಸ್ ಠಾಣೆಗಳಲ್ಲಿ ಮಾನಹಾನಿ, ದ್ವೇಷವನ್ನು ಉತ್ತೇಜಿಸುವುದು ಮತ್ತು ಜನರ ನಡುವೆ ಅಸಂಗತತೆಯನ್ನು ಹರಡುವುದು ಮತ್ತು ಇತರ ಆರೋಪಗಳಿಗಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ಶರದ್ ಪವಾರ್ ವಿರುದ್ಧ ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ ಆರೋಪದ ಮೇಲೆ 23 ವರ್ಷದ ಫಾರ್ಮಸಿ ವಿದ್ಯಾರ್ಥಿ ನಿಖಿಲ್ ಭಾಮ್ರೆ ಅವರನ್ನು ನಾಸಿಕ್ ಪೊಲೀಸರು ಬಂಧಿಸಿದ್ದರು.

Share