Connect with us


      




ಆರೋಗ್ಯ

ಮಹೇಶ್‌ ಬಾಬುಗೆ ಕೋವಿಡ್‌ ದೃಢ

UNI Kannada

Published

on

ಹೈದರಾಬಾದ್, ಜ 7(ಯುಎನ್‌ ಐ) ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಬರದಂತೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ, ತಮಗೆ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಪ ಪ್ರಮಾಣದ ರೋಗ ಲಕ್ಷಣಗಳಿರುವ ಕಾರಣ ವೈದ್ಯರ ಸಲಹೆಯೊಂದಿಗೆ ಪ್ರಸ್ತುತ ಹೋಂ ಐಸೋಲೇಷನ್‌ ನಲ್ಲಿ ಇರುವುದಾಗಿ ಅವರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮೊಂದಿಗೆ ನಿಕಟವಾಗಿದ್ದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಪ್ರತಿಯೊಬ್ಬರೂ ಕೊರೊನಾ ನಿಯಮ ಪಾಲಿಸಬೇಕು, ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಮಹೇಶ್ ಅವರ ಅತ್ತಿಗೆ, ನಮ್ರತಾ ಅವರ ಅಕ್ಕ ಶಿಲ್ಪಾ ಶಿರೋಡ್ಕರ್ ಕರೋನಾ ಸೋಂಕಿಗೆ ಒಳಗಾಗಿದ್ದರು. ಶಿಲ್ಪಾ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.

Share