Published
2 months agoon
ಕೊಲ್ಕತ್ತಾ: ಮಾರ್ಚ್ ೧೩ (ಯು.ಎನ್.ಐ.) ಪಶ್ಚಿಮ ಬಂಗಾಳದ ಕಿರುತೆರೆಯ ಖ್ಯಾತ ನಟಿ ರೂಪಾ ದತ್ತ ಅವರನ್ನು ಸ್ಥಳೀಯ ಪೊಲೀಸರು ಜೇಬುಗಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ.
ಮಾರ್ಚ್ ೧೨ರ ರಾತ್ರಿ ಘಟನೆ ನಡೆದಿದೆ. ಕೊಲ್ಕತ್ತಾದ ಅಂತರಾಷ್ಟ್ರೀಯ ಪುಸ್ತಕಮೇಳ ೨೦೨೨ಯಲ್ಲಿ ನಟಿ ರೂಪಾ ಅವರು ಕಸದ ಬುಟ್ಟಿಗೆ ಪರ್ಸ್ ಎಸೆಯುತ್ತಿರುವುದನ್ನು ಕಂಡು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅವರು ಸೂಕ್ತ ಉತ್ತರ ನೀಡಲಿಲ್ಲ ಎನ್ನಲಾಗಿದೆ. ಬಳಿಕ ಅವರ ಬ್ಯಾಗ್ ಪರಿಶೀಲಿಸಿದಾಗ ಹಲವು ಪರ್ಸ್ ಗಳು ಪತ್ತೆಯಾಗಿವೆ. ಜೊತೆಗೆ ೭೫ ಸಾವಿರ ರೂಪಾಯಿ ಪತ್ತೆಯಾಗಿದೆ.
ನಟಿ ರೂಪಾ ಅವರ ಬ್ಯಾಗಿನಲ್ಲಿ ಪುಟ್ಟ ಡೈರಿ ಪತ್ತರಯಾಗಿದೆ. ಅದರಲ್ಲಿ ಕೊಲ್ಕತ್ತಾದ ಜನನಿಬಿಡ ಪ್ರದೇಶಗಳ ಉಲ್ಲೇಖಗಳಿವೆ ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ರೂಪಾ ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ತನಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದರು ಎಂದು ತಪ್ಪಾಗಿ ಆರೋಪಿಸಿದ್ದರು. ಟ್ವಿಟ್ಟರ್ ನಲ್ಲಿ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಗಳನ್ನು ಸಹ ಹಂಚಿಕೊಂಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಅದು ಖ್ಯಾತ ನಿರ್ಮಾಪಕರ ಹೆಸರಿನ ಬೇರೊಬ್ಬ ವ್ಯಕ್ತಿ ಎಂಬುದು ಪತ್ತೆಯಾಗಿತ್ತು.
ಮುಂಡ್ಕಾ ಬೆಂಕಿ ದುರಂತ; ೨೭ ಸಾವು, ೧೯ ಮಂದಿ ಕಾಣೆ
ಮಧ್ಯ, ಪೂರ್ವ ಯುರೋಪ್ನಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್ ಪತ್ತೆ
ಕಸ್ಟಡಿ ಸಾವು: 6 ಪೊಲೀಸರ ಬಂಧನ
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಕೇಸ್; ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದ ಓವೈಸಿ
ಆನೆಬೇಟೆ ಪ್ರಕರಣಗಳು; ತನಿಖಾ ತಂಡ ರಚಿಸಿದ ಮದ್ರಾಸ್ ಹೈಕೋರ್ಟ್
‘ಘೋಸ್ಟ್ ಗನ್’ಗಳ ನಿಯಂತ್ರಣಕ್ಕೆ ನೂತನ ಎಟಿಎಫ್ ಮುಖ್ಯಸ್ಥರ ನೇಮಕ; ಬಿಡೆನ್ ಕ್ರಮ