Connect with us


      




ರಾಜಕೀಯ

ಅಶೋಕ್ ಹಾರ್ನಳ್ಳಿ ಗೆಲುವಿಗೆ  ನಟಿ ಮಾಳವಿಕಾ  ಮನವಿ

UNI Kannada

Published

on

ಬೆಂಗಳೂರು ,  ನ 9 (ಯುಎನ್ಐ) ಮುಂದಿನ ತಿಂಗಳು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಅಶೋಕ್ ಹಾರನಹಳ್ಳಿಯವರನ್ನು  ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಖ್ಯಾತ  ಚಲನ ಚಿತ್ರ ಹಾಗೂ ಟಿ.ವಿ. ಧಾರಾವಾಹಿ ನಟಿ  ಮಾಳವಿಕ ಅವಿನಾಶ್ ಮನವಿ ಮಾಡಿದರು.

ಬಸವನಗುಡಿಯ ರಾಘವೇಂದ್ರ ಮಠದ  ಸಭಾಂಗಣದಲ್ಲಿ ಸೋಮವಾರ ನಡೆದ ಅಶೋಕ್ ಹಾರ್ನಳ್ಳಿ ಅಭಿಮಾನಿಗಳ  ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಶೋಕ್ ಹಾರ್ನಳ್ಳಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಲ್ಲಿ ಮಹಾ ಸಭೆಯ ಹಾಗೂ ಅಧ್ಯಕ್ಷ ಸ್ಥಾನದ ಗೌರವ ಹೆಚ್ಚಲಿದೆ ಎಂದರು.

ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೆಚ್ಚಿನ ಬಹುಮತದಿಂದ ಅವರನ್ನು ಆಯ್ಕೆ ಮಾಡಬೇಕಿದೆ. ಕೆಲವರಿಗೆ ಸ್ಥಾನದ  ಬಲದಿಂದ ಗೌರವ ಬರುತ್ತದೆ, ಇನ್ನು ಕೆಲವರಿಂದ ಸ್ಥಾನಕ್ಕೆ ಗೌರವ ಬರುತ್ತದೆ, ಅಶೋಕ್ ಹಾರನಹಳ್ಳಿ ಅವರನ್ನು ಅಧ್ಯಕ್ಷ ರನ್ನಾಗಿ  ಆಯ್ಕೆ ಮಾಡಿದರೆ ಆ  ಸ್ಥಾನಕ್ಕೆ ಗೌರವ ಬರುತ್ತದೆ ಎಂದರು.

ಮಹಾಸಭಾದ ಸಂಘಟನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಿ ಅವರನ್ನು ಚಟುವಟಿಕೆ ಯಲ್ಲಿ ಬಳಸಿಕೊಳ್ಳುವಂತೆ  ಮನವಿ ಮಾಡಿದರು.

ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಮಾತನಾಡಿ, ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳದೆ, ಅಶೋಕ್ ಹಾರನಹಳ್ಳಿ ಅವರ ಪರ ಹೆಚ್ಚಿನ ಸಂಖ್ಯೆಯ ಮತಗಳಿಂದ ಗೆಲ್ಲಿಸಬೇಕು ಎಂದೂ ವಿನಂತಿಸಿದರು. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡುವುದು ಬೇಡ ಎಂದರು.

ಅಶೋಕ್  ಹಾರನಹಳ್ಳಿ  ಮಾತನಾಡಿ, ಯಾವುದೇ ರೀತಿಯಲ್ಲೂ ಬೇರೆ ಅಭ್ಯರ್ಥಿಗಳ ಟೀಕೆಗಳಿಗೆ ಬಹಿರಂಗವಾಗಿ ಪ್ರತಿಕ್ರಿಯಿಸುವುದು ಬೇಡ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರುಮಹಾಸಭಾದ ಅಧ್ಯಕ್ಷ ನಾಗಿ ಆಯ್ಕೆಯಾದರೆ ಕಾರ್ಯ ವಿಧಾನದಲ್ಲಿ ಬಹಳಷ್ಟು ಬದಲಾವಣೆ ತಂದು ಯುವಕರು ಹಾಗೂ ಮಹಿಳೆಯರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರುಎಂ.ವಿ.ಸತ್ಯನಾರಾಯಣ್, ಕೆ.ಎನ್.ಸತ್ಯಮೂರ್ತಿ, ನರಸಿಂಹ ಮೂರ್ತಿ ನವಮಂತ್ರಾಲಯ ಮಂದಿರದ ಅಂಬಾ ಪ್ರಸಾದ್ ತೇಜಸ್ವಿ, ಕೃಷ್ಣ, ಮಾತನಾಡಿದರು,

Share