Published
5 months agoon
By
Vanitha Jainಚೆನ್ನೈ, ಡಿಸೆಂಬರ್ 13(ಯು.ಎನ್.ಐ) ಸತತ 18 ವರ್ಷಗಳಿಂದ ಕಾಲಿವುಡ್ನಲ್ಲಿ ಮಿಂಚುತ್ತಿರುವ, ನಂ ಒನ್ ನಾಯಕಿಯಾಗಿಯೇ ಉಳಿದುಕೊಂಡಿರುವ ಭಾರತೀಯ ಸಿನಿ ತಾರೆ ನಯನಾ ತಾರಾ ಉದ್ಯಮದತ್ತ ಹೆಜ್ಜೆ ಇಟ್ಟಿದ್ದಾರೆ.
ನಟಿ ನಯನತಾರಾ, ಚರ್ಮರೋಗ ವೈದ್ಯ ರೇನಿಟಾ ರಾಜನ್ ಸಹಭಾಗಿತ್ವದಲ್ಲಿ, ಡಿಸೆಂಬರ್ರಲ್ಲಿ ಹೊಸ ಕಾಸ್ಮೆಟಿಕ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಈ ಕಂಪೆನಿಯು ಸೌಂದರ್ಯವರ್ಧಕ ಕಂಪೆನಿಯಾಗಿದ್ದು, ವಿಶ್ವದ ಎಲ್ಲಾ ಲಿಪ್ (ತುಟಿ) ಉತ್ಪನ್ನಗಳ ಸಂಗ್ರಹ ಕಂಪೆನಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕಗಳ ಬಳಕೆಗೆ ಲಿಂಗಭೇದವಿಲ್ಲ. ಮಹಿಳೆಯರಷ್ಟೇ ಅಲ್ಲದೇ ಪುರುಷರೂ ಸಹ ಸೌಂದರ್ಯ ವರ್ಧಕಗಳನ್ನು ಬಳಸುತ್ತಿದ್ದಾರೆ. ಹೌದು ಈ ಹಿನ್ನೆಲೆಯಲ್ಲಿ ಲಿಪ್ ಬಾಮ್ ಸ್ಟೋರ್ ಆರಂಭಿಸಿದ್ದಾರೆ.
ಚರ್ಮದ ಉತ್ಪನ್ನಗಳು ಎಂದಾಕ್ಷಣ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾನು ಚರ್ಮದ ಸುರಕ್ಷತೆ ಮತ್ತು ಆರೈಕೆಗಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಮೇಲೆ ಹೆಚ್ಚು ಗಮನ ನೀಡುತ್ತೇನೆ. ಇದೇ ನಿಲುವಿನಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಗುರಿಯೊಂದಿಗೆ ಕಂಪೆನಿ ಆರಂಭಿಸಲಾಗಿದೆ ಎಂದು ಕಂಪೆನಿ ಉದ್ಘಾಟನೆಯಲ್ಲಿ ಹೇಳಿದ್ದಾರೆ.
ತನ್ನ ಕಂಪೆನಿ ತಯಾರಿಸಿದ ಸೃಜನಶೀಲ ಉತ್ಪನ್ನಗಳ ಮೇಲೆ ಹೆಮ್ಮೆ ಪಡುವ ನಯನಾ ತಾರಾ ಜನರ ನಿರೀಕ್ಷೆಗ ಅನುಗುಣವಾಗಿಯೇ ಉತ್ಪನ್ನಗಳು ಇರಲಿದೆ ಎಂದು ಹೇಳಿದ್ದಾರೆ.