Connect with us


      




ಕ್ರೀಡೆ

ಜಯದ ಸಮೀಪ ನಿಂತಿರುವ ರೋಹನ್ ಬೋಪಣ್ಣ- ರಾಮ್‌ಕುಮಾರ್ ಜೋಡಿ

UNI Kannada

Published

on

ಅಡಿಲೇಡ್, ಜ 9 (ಯು ಎನ್‌ ಐ) ಹೊಸ ವರ್ಷವನ್ನು ಪ್ರಶಸ್ತಿಯೊಂದಿಗೆ ಆರಂಭಿಸಲು ಭಾರತದ ಟೆನ್ನಿಸ್‌ ಜೋಡಿ ರೋಹನ್‌ ಬೋಪಣ್ಣ-ರಾಮ್‌ ಕುಮಾರ್‌ ಜೋಡಿ ಜಯ ಸಮೀಪ ನಿಂತಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಅಡಿಲೇಡ್ ಓಪನ್ ಎ ಟಿ ಪಿ-250 ಟೂರ್ನಿಯಲ್ಲಿ ಬೋಪಣ್ಣ-ರಾಮ್‌ಕುಮಾರ್ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬೋಪಣ್ಣ ಅವರ ವೃತ್ತಿ ಜೀವನದಲ್ಲಿ ಇದು 48ನೇ ಎಟಿಪಿ ಟೂರ್ನಮೆಂಟ್ ಡಬಲ್ಸ್ ಫೈನಲ್ ಆಗಿದೆ… ರಾಮ್‌ಕುಮಾರ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಪಡೆದಿದ್ದಾರೆ.
ಶನಿವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಶ್ರೇಯಾಂಕ ರಹಿತ ಬೋಪಣ್ಣ–ರಾಮ್‌ಕುಮಾರ್‌ ಜೋಡಿ 6–2, 6–4ದೊಂದಿಗೆ ನಾಲ್ಕನೇ ಶ್ರೇಯಾಂಕದ ಸ್ಯಾಂಟಿಯಾಗೊ ಗೊನ್ಜಾಲೆಜ್‌ (ಮೆಕ್ಸಿಕೊ)–ತೊಮಿಸ್ಲಾವ್‌ ಬಿರ್ಕಿಚ್‌ (ಬೋಸ್ನಿಯಾ – ಹರ್ಜೆಗೊವಿನಾ) ಜೋಡಿಯನ್ನು ಮಣಿಸಿದೆ.

ಇಂದು ನಡೆಯಲಿರುವ ಫೈನಲ್‌ನಲ್ಲಿ ಬೋಪಣ್ಣ-ರಾಮ್‌ಕುಮಾರ್ ಜೋಡಿ ಅಗ್ರ ಶ್ರೇಯಾಂಕದ ಇವಾನ್ ಡೊಡಿಗ್ (ಕ್ರೊಯೇಷಿಯಾ)-ಮಾರ್ಸೆಲ್ಲೊ ಮೆಲೊ (ಬ್ರೆಜಿಲ್) ಜೋಡಿಯನ್ನು ಎದುರಿಸಲಿದೆ. ಬೋಪಣ್ಣ – ರಾಮ್‌ಕುಮಾರ್ ಜೋಡಿ ಸ್ಯಾಂಟಿಯಾಗೊ-ಬಿರ್ಕಿಚ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ 58 ನಿಮಿಷಗಳ ಹಣಾಹಣಿ ನಡೆಸಿತು.

Share