Published
5 months agoon
By
Vanitha Jainಕಾಬೂಲ್, ಡಿಸೆಂಬರ್ 13(ಯು.ಎನ್.ಐ) ಅಫ್ಘಾನಿಸ್ತಾನವು ಈ ವರ್ಷದ ಕೊನೆಯ ಪೋಲಿಯೋ ಲಸಿಕಾ ಅಭಿಯಾನವನ್ನು ಸೋಮವಾರದಿಂದ ಆರಂಭಿಸಿದೆ ಎಂದು ಅಫ್ಘಾನಿಸ್ತಾನ ಆರೋಗ್ಯ ಸಚಿವಾಲಯವು ತಿಳಿಸಿದೆ. ಇದು ಈ ವರ್ಷದ ಕೊನೆಯ ಲಸಿಕಾ ಅಭಿಯಾನವಾಗಿದೆ.
ಈ ಪೋಲಿಯೋ ಲಸಿಕಾ ಅಭಿಯಾನವು ಮುಂದಿನ ಎರಡು ವಾರಗಳವರೆಗೆ ಮುಂದುವರೆಯಲಿದ್ದು, ಈ ವಾರ 34 ಪ್ರಾಂತ್ಯಗಳಲ್ಲಿ 21 ಪ್ರಾಂತ್ಯಗಳ ಮಕ್ಕಳಿಗೆ ಪೋಲಿಯೋ ಹಾಕಲಾಗುತ್ತದೆ.
ಯುನೈಟೆಡ್ ನೇಷನ್ಸ್ ಇಂಟರ್ ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್ (ಯುನಿಸೆಫ್) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲಿತವಾಗಿರುವ ಈ ಅಭಿಯಾನದ ಮುಂದಿನ ಡ್ರೈವ್ ಕಂದಹಾರ್, ಹೆಲ್ಮಂಡ್, ನಿಮ್ರೋಜ್, ಝಬುಲ್, ಉರುಜ್ಗನ್, ನಂಗರ್ಹಾರ್, ಕುನಾರ್, ನುರಿಸ್ತಾನ್, ಲಗ್ಮನ್, ಘಜ್ನಿ, ಪಕ್ತಿಕಾ, ಬಾಲ್ಖ್ ಮತ್ತು ಘೋರ್ನ 13 ಪ್ರಾಂತ್ಯಗಳನ್ನು ಒಳಗೊಂಡಿದೆ” ಎಂದು ಸಚಿವಾಲಯ ಹೇಳಿಕೆ ನೀಡಿದೆ.
ಪೋಲಿಯೋ ರೋಗವು ಒಂದು ಪಿಡುಗಾಗಿ ಕಾಣಿಸಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ತದನಂತರದ ಸ್ಥಾನದಲ್ಲಿದೆ.
ಅಫ್ಘಾನಿಸ್ತಾನ ರಜಧಾನಿ ಕಾಬೂಲ್ ಸೇರಿದಂತೆ ರಾಷ್ಟ್ರದ ಪ್ರತಿಯೊಬ್ಬರು ತಮ್ಮ ಮಕ್ಕಳ ಸುರಕ್ಷತೆಗಾಗಿ ಈ ಪೋಲಿಯೋ ಲಸಿಕೆಯನ್ನು ಯಾವುದೇ ಭಯವಿಲ್ಲದೇ ತೆಗೆದುಕೊಳ್ಳಬಹುದು ಎಂದು ಹೇಳಿದೆ.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!