Connect with us


      
ರಾಜಕೀಯ

ಬಿಜೆಪಿಗೆ ಬೈ ಬೈ ಹೇಳಿದ ಮತ್ತೆ ಮೂವರು ಶಾಸಕರು

Published

on

ಲಕ್ನೋ: ಜನೆವರಿ 11 (ಯು.ಎನ್.ಐ.) ಉತ್ತರಪ್ರದೇಶ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಿ ಇನ್ನು ಕೆಲವು ಗಂಟೆಗಳು ಕಳೆದಿಲ್ಲ. ಇದೀಗ ಮತ್ತೆ ಮೂವರು ಬಿಜೆಪಿ ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ತಿಲ್ಹಾರ್ ಶಾಸಕ ರೋಶನ್ ಲಾಲ್ ವರ್ಮಾ, ಬಿಲ್ಹೌರ್ ಶಾಸಕ ಭಗವತಿ ಪ್ರಸಾದ್ ಸಾಗರ್ ಮತ್ತು ತಿಂದವಾರಿ ಶಾಸಕ ಬ್ರಜೇಶ್ ಪ್ರಜಾಪತಿ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯ ಅವರಂತೆ, ರೋಶನ್ ಲಾಲ್ ವರ್ಮಾ ಕೂಡ ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ.

ಐದು ವರ್ಷಗಳಿಂದ ನಮ್ಮ ಮಾತಿಗೆ ಕಿಮ್ಮತ್ತು ನೀಡಲಿಲ್ಲ. ಆದ ಕಾರಣ ಈ ನಿರ್ಧಾರಕ್ಕೆ ಬರಲಾಯಿತು ಎಂದು ರೋಶನ್ ಲಾಲ್ ವರ್ಮಾ ಹೇಳಿದ್ದಾರೆ.

ರಾಜೀನಾಮೆ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್ ಸರಕಾರ ದಲಿತ ಮತ್ತು ಹಿಂದುಳಿದವರನ್ನು ಕಡೆಗಣಿಸುತ್ತಿದೆ. ದಲಿತರು ಮತ್ತು ಹಿಂದುಳಿದವರ ಬಗ್ಗೆ ಸರಕಾರ ತೋರಿರುವ ಹೀನಾ ಧೋರಣೆಯೇ ನನ್ನ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ರಾಜಕೀಯ

ಮೇಕೆದಾಟು ಪಾದಯಾತ್ರೆ; ಕಾಂಗ್ರೆಸಿಗೆ ವರವೋ ಶಾಪವೋ ?

Published

on

ಹುಳ್ಳಿ ಪ್ರಕಾಶ

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಅವರು 2023ರ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು, ತಮ್ಮ ವೈಯುಕ್ತಿಕ ಕಾರ್ಯಸೂಚಿ  (ಮೇಕೆದಾಟು ಪಾದಯಾತ್ರೆ ಮೇಲ್ನೊಟಕ್ಕೆ ಎಐಸಿಸಿ ಅನುಮೊದಿತವಾಗಿ ಕಂಡ್ರು ಅದು ಕರ್ನಾಟಕ ಕಾಂಗ್ರೆಸಿನ ಸಾಮೂಹಿಕ ನಿರ್ಧಾರವಾಗಿರಲಿಲ್ಲ.  ಬದಲಿಗೆ ಡಿಕೆ ಸಹೋದರರ ಹಠಮಾರಿ ನಿರ್ಧಾರವಾಗಿತ್ತು ಎನ್ನುವ ಸಂಗತಿ ಗುಟ್ಟಿನ ವಿಚಾರವಂತು ಅಲ್ಲ)  ಅನ್ವಯ  ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆ ಹೈಕೋರ್ಟ್ ಸಕಾಲಿಕ ಮಧ್ಯಪ್ರವೇಶದಿಂದಾಗಿ ಸದ್ಯ ಮೊಟಕುಗೊಂಡಿದೆ.

ಪಾದಯಾತ್ರೆ ಸ್ಥಗಿತವಾಗಿರಬಹುದು. ಆದರೆ ಈ ಯಾತ್ರೆ ಆರಂಭಿಸಿದ ಬಳಿಕ  ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪರಿಸರ ಕ್ಷೇತ್ರಗಳ ವೇದಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ಇಮೇಜ್ ಗೆ ಬಹು ದೊಡ್ಡ ಹೊಡೆತವಂತು ಬಿದ್ದಿದೆಯೇ ಎಂಬುದೇ ಸದ್ಯದ ಪ್ರಶ್ನೆ.  ಜಾಗತಿಕ ಮಟ್ಟದ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೆಂಗಳೂರಿಗೆ ಆಗಮಿಸಿ ಮೇಕೆದಾಟು ಆಣೆಕಟ್ಟು ನಿರ್ಮಾಣವನ್ನು ವಿರೋಧಿಸುವ ಅಭಿಯಾನಕ್ಕೆ ಚಾಲನೆ ನೀಡಿದ ಸುದ್ದಿ ದೇಶ, ವಿದೇಶಗಳ ಮಾಧ್ಯಮಗಳಲ್ಲಿ ಜೋರಾಗಿಯೇ ಸದ್ದು ಮಾಡಿದೆ.

ಮೇಧಾ ಪಾಟ್ಕರ್‌ ಅವರ ಪ್ರವೇಶದ ಬಳಿಕ  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪರಿಸರವಾದಿಗಳು, ಪರಿಸರ ತಜ್ಞರು, ಪರಿಸರ ಪರವಾದ ಹೋರಾಟಗಾರರು ಮೇಕೆದಾಟಿನತ್ತ ಚಿತ್ತ ಹರಿಸಲಾರಂಭಿಸಿದ್ದಾರೆ. ಮೇಕೆದಾಟುಗೆ ಆಣೆಕಟ್ಟು ನಿರ್ಮಾಣ ಮಾಡುವುದೆಂದರೆ ಅದು ಕಾವೇರಿ ಆಭಯಾರಣ್ಯದ ಒಡಲಿಗೇನೆ ಆಪಾಯ ತಂದೊಡ್ಡುವುದು, ಅದರ ಸುತ್ತಲಿನ ಪರಿಸರಕ್ಕೆ ವಿರುದ್ಧವಾದುದು ಎನ್ನುವ ಚರ್ಚೆಗಳು, ವ್ಯಾಖ್ಯಾನಗಳು ದೇಶ, ವಿದೇಶಗಳಲ್ಲಿ ಜೋರಾಗುತ್ತಲೆ ಇವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ  ಬೆಂಗಳೂರಿಗರ ಜಲದಾಹ ನಿವಾರಣೆಗೋಸ್ಕರವೇ ಅಲ್ಲಿನ ದಟ್ಟರಣ್ಯಗಳ ಮುಳುಗಡೆಗೆ, ಪರಿಸರದ ನಾಶಕ್ಕೆ, ಆನೆ, ಹುಲಿ,ಚಿರತೆ, ಸರಿಸೃಪಗಳು ಸೇರಿದ ಪ್ರಾಣಿ ಮತ್ತು ಇತರ ಜೀವವೈವಿಧ್ಯಗಳ  ವಾಸ ಸ್ಥಾನದ ವಿನಾಶಕ್ಕೆ ಮಾರಕವಾಗುವಂತಹ ಯೋಜನೆಗಳ ಪರವಾಗಿ ನಿಂತಿದೆ  ಎನ್ನುವ ಸಂದೇಶ ಡಿಕೆ ಸಹೋದರರ ಪಾದಯಾತ್ರೆಯ ವೇಗಕ್ಕಿಂತಲೂ ಶರವೇಗದಲ್ಲಿ ಇಡೀ ಜಗತ್ತನ್ನು ತಲುಪಿದೆ.

ಈ ಕಾರಣಕ್ಕೇನೆ ಜಾಗತಿಕ ಪರಿಸರವಾದಿಗಳ ಎದುರುಗಡೆ  ಕೈ ಪಕ್ಷದ ನಾಯಕ ರಾಹುಲ್ ಗಾಂಧಿ  ತೀವ್ರ ಮುಜುಗರಕ್ಕೀಡಾಗುವಂತೆಯೂ ಆಗಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಗೆದ್ದ ಬಳಿಕ ಪರಿಸರವನ್ನು ಪ್ರೀತಿಸುವ, ಉಳಿಸುವ ಮತ್ತು ಸಂರಕ್ಷಿಸುವ ವಿಚಾರದತ್ತ ರಾಹುಲ್ ಗಾಂಧಿ ಸಾಕಷ್ಟು ಆಸಕ್ತಿವಹಿಸುತ್ತಲೇ ಬಂದಿದ್ದರು. ಈ ಕೆಲಸ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪರಿಸರ ವೇದಿಕೆಗಳಲ್ಲಿ ಅವರಿಗೆ ಒಳ್ಳೆಯ ಇಮೇಜ್ ತಂದು ಕೊಟ್ಟಿದೆ.

ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರುಗಳ ರಾಜಕೀಯ ನಡೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಾದ, ವಿವಾದಗಳನ್ನು ಹುಟ್ಟುಹಾಕಿವೆ. ಒಂದಿಷ್ಟನ್ನು ಉದ್ದೇಶಪೂರ್ವಕವಾಗಿ ಹುಟ್ಟು ಹಾಕಲಾದ ನಡೆಗಳು ಎನ್ನುವ ಮಾತುಗಳಿವೆ. ಇನ್ನೂ ಬಿಜೆಪಿ, ಸಂಘಪರಿವಾರದವರ ನಿತ್ಯದ ಕಟು ಟೀಕೆಗೂ ರಾಹುಲ್  ಆಹಾರವಾಗುತ್ತಲೆ ಇದ್ದಾರೆ. ಆದರೆ ರಾಜಕಾರಣ ಏನೇ ಇರಲಿ. ಪರಿಸರದ ವಿಚಾರಕ್ಕೆ ಬಂದಾಗ    ಈ ಸಹೋದರ – ಸಹೋದರಿ  ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಸೇರಿದಂತೆ ಪರಿಸರ ರಕ್ಷಿಸುವ, ಉಳಿಸುವ ಕುರಿತಂತೆ  ಹೆಚ್ಚೆಚ್ಚು ಮಾತನಾಡುತ್ತಿದ್ದಾರೆ.  ಸಂವಾದಗಳಲ್ಲೂ ಭಾಗಿಯಾಗುತ್ತಿದ್ದಾರೆ. ಆದರೆ  ಈ ತರಹದ ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ.

ಪರಿಸರ ಉಳಿಸುವ, ಅದನ್ನು ಪ್ರೀತಿಸುವ ವಿಚಾರ ಈಗಿನ ಯುವಜನಾಂಗದ ಪಾಲಿಗೆ  ಪ್ರಿಯವಾದ ಸಂಗತಿಯಾಗಿದೆ.    ಪರಿಸರದ ಪರವಾಗಿ ಕೆಲಸ ಮಾಡಲು, ಜಾಗೃತಿ ಮೂಡಿಸುವಂತಹ ಕಾರ್ಯಗಳತ್ತ ದೇಶ, ವಿದೇಶಗಳಲ್ಲಿ ಯುವ ಸಮೂಹ ಹೆಚ್ಚೆಚ್ಚು ಆಸಕ್ತಿವಹಿಸುತ್ತಿದೆ..

ಇಂತಹ ಹೊತ್ತಿನಲ್ಲಿಯೇ ಇತ್ತ  ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ  ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಆರಂಭವಾಯ್ತು. ಹದಿನಾರು ಸಾವಿರಕ್ಕೂ ಅಧಿಕ ಎಕರೆ ದಟ್ಟಕಾಡನ್ನು ಮುಳುಗಿಸಿ ಮೇಲೇಳುವ ಮೇಕೆದಾಟು ಆಣೆಕಟ್ಟು ಯೋಜನೆ  ಪರಿಸರ ಸಂರಕ್ಷಣೆಗೆ ಪೂರಕವಾದ ಯೋಜನೆಯಂತೂ ಅಲ್ಲವೇ,ಅಲ್ಲ. ನಿಸರ್ಗ ಸಂಪತ್ತು, ಪ್ರಾಣಿ,ಪಕ್ಷಿ ಸಂಕುಲ, ಸಸ್ಯತಳಿಯನ್ನು ನಾಶ ಮಾಡುವಂತಹ, ಆದಿವಾಸಿ ಬುಡಕಟ್ಟು ಜನರನ್ನು ಕಾಡಿನಿಂದ ಒಕ್ಕಲೆಬ್ಬಿಸುವಂತಹ  ಅಪ್ಪಟ ಪರಿಸರ ವಿರೋಧಿ ಯೋಜನೆ ಆಗಿರುವುದಂತು ದಿಟ.

ರಾಜಕಾರಣಿಗಳು.   ಬೆಂಗಳೂರಿನ ಜನರಿಗೆ ಕುಡಿಯುವ ನೀರು ಕೊಡಲು    ಮೇಕೆದಾಟು ಬೇಕೆನ್ನುತ್ತಾರೆ. ಕಾಡು ಮುಳುಗಿಸಿ, ಪರಿಸರ ನಾಶ ಮಾಡಿಯೇ ಬೆಂಗಳೂರಿನ ಜಲ ದಾಹ ಇಂಗಿಸಬೇಕೆಂದಿಲ್ಲ. ದಾಹ ಇಂಗಿಸಲು ಬೆಂಗಳೂರಿನ ಒಡಲಾಳದಲ್ಲಿಯೇ ಬೇಕಾದಷ್ಟು ಪರ್ಯಾಯ ಜಲ ಮಾರ್ಗಗಳಿವೆ. ಲಭ್ಯ ಇರುವ ಮಾರ್ಗಗಳನ್ನು ಸೂಕ್ತವಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಲು ಆಳುವ ಸರ್ಕಾರ ಮತ್ತು ವಿರೋಧಪಕ್ಷಗಳು ಗಟ್ಟಿ ಮನಸ್ಸು ಮಾಡಿ, ಕಾರ್ಯರೂಪಕ್ಕಿಳಿದರೆ ಸಾವಿರಾರು ಎಕರೆ ದಟ್ಟರಣ್ಯಗಳನ್ನು ಮುಳುಗಿಸಿ, ನಾಶಗೊಳಿಸಿ, ಕಾಡಿನ ಮಕ್ಕಳನ್ನು ಒಕ್ಕಲೆಬ್ಬಿಸುವಂತಹ ಪರಿಸರ, ಜೀವ ವಿರೋಧಿ ಯೋಜನೆಗಳ ಕಡೆಗೆ ಕಣ್ಣೆತ್ತಿ ನೋಡುವುದು ಶಾಶ್ವತವಾಗಿ ತಪ್ಪಲಿದೆ.

ಬೆಂಗಳೂರಿನಲ್ಲಿ  ವಾರ್ಷಿಕವಾಗಿ  ಸುರಿಯುವ ಮಳೆ ನೀರನ್ನು ಮಳೆ ಕೊಯ್ಲು ಮೂಲಕ ಶೇಖರಣೆ ಮಾಡಿದರೆ  ಸುಮಾರು ಹದಿನೈದು ಟಿಎಂಸಿಯಷ್ಟು ನೀರನ್ನು  ಸಂಗ್ರಹಿಸಬಹುದು. ಇನ್ನೂ ಪ್ರಸ್ತುತ ಬೆಂಗಳೂರಿಗೆ ಪೂರೈಕೆ ಆಗುತ್ತಿರುವ ಮತ್ತು ಬಳಕೆಯಲ್ಲಿ ಶೇಕಡ ಮುವತ್ತಕ್ಕೂ ಅಧಿಕ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಇದನ್ನು ಸರಿಪಡಿಸಿದರೆ ಹಾಗೂ ನಗರದ ಸುತ್ತಲೂ ಇರುವ ಕೆರೆ,ಕಟ್ಟೆಗಳನ್ನು ಜಲಪೂರಣಗೊಳಿಸಿದರೆ ಇನ್ನೂ ಹದಿನೈದು ಟಿಎಂಸಿ ನೀರನ್ನು ಪಡೆಯಬಹುದು.

ಇನ್ನು ಬಳಸಿದ ನೀರನ್ನು ಮರು ಬಳಕೆಮಾಡುವ ಯೋಜನೆ ಜಾರಿಗೊಳಿಸಿದರೆ ಅದರಿಂದಲೂ ಸಾಕಷ್ಟು ಟಿಎಂಸಿ ನೀರು ಪಡೆಯಬಹುದು. ಇವು ಬೆಂಗಳೂರಿನೊಳಗಡೆ ಎದುರಿಗಿರುವ ಜಲದಾಹ ನಿವಾರಿಸುವಂತಹ ಕಾರ್ಯಸಾಧ್ಯ ಯೋಜನೆಗಳಾಗಿವೆ.

ನಮಗಿಂತಲೂ ಅರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಕೆಳಗಿರುವ ಸೆನೆಗಲ್ ನಂತಹ ಕಡು ಬಡತನದ ದೇಶ ಕೂಡ ಬಳಕೆ ಮಾಡಿದ ನೀರನ್ನು ಪುನರ್ ಸಂಸ್ಕರಿಸಿ ಅದನ್ನು ಶುದ್ಧವಾದ ಕುಡಿಯುವ ನೀರನ್ನಾಗಿ, ದಿನ ಬಳಕೆಗೆ ಬಳಸಲು ಅತ್ಯಂತ ವೈಜ್ಞಾನಿಕವಾದ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ತನ್ನ ಜನರ ಜಲದಾಹವನ್ನು ಅಚ್ಚುಕಟ್ಟಾಗಿ ನಿಗಿಸುತ್ತಿದೆ.

ಪಕ್ಕದ ಸಿಂಗಪೂರ ದೇಶ ಅಳವಡಿಸಿಕೊಂಡಿರುವ  ಸಮುದ್ರದ ನೀರನ್ನು ಕುಡಿಯುವ ಸಿಹಿ ನೀರಾಗಿಸುವ ತಂತ್ರಗಾರಿಕೆ ಲೋಕಕ್ಕೆ ಮಾದರಿಯಾಗಿದೆ. ಇಂತಹ ನೀರಿನ ಪವಾಡಗಳು ಕಣ್ಣಿನ ಮುಂದೆ ನಡೆಯುತ್ತಿದ್ದರು ಇನ್ನೂ ನಾವು ಅರಣ್ಯ ಮುಳುಗಿಸಿ, ಪ್ರಾಣಿ,ಪಕ್ಷಿಗಳ, ಮರಗಳ ಮರಣ ಹೋಮ ಮಾಡಿಯೇ ನೀರು ತರುವ ಯೋಜನೆಗೆ ಜೋತು ಬಿಳ್ಳುತ್ತಿರುವುದು ಆಶ್ಚರ್ಯಕರ ಸಂಗತಿ !

ಮೇಕೆದಾಟು ಯೋಜನೆಗೆ ಗುರುತಿಸಿರುವ ಸ್ಥಳ ದಟ್ಟಕಾಡಿರುವ ಕಾವೇರಿ ಅಭಯಾರಣ್ಯ ಪ್ರದೇಶವಾಗಿದೆ. ಇದು  ಅತ್ಯಂತ ಸೂಕ್ಷ್ಮ ಜೀವವೈವಿಧ್ಯಗಳ ತಾಣ. ದೇಶದ ಪ್ರಮುಖ  ಆನೆಗಳ ಕಾರಿಡಾರ್ ಕೂಡ ಆಗಿದೆ.  ಹುಲಿ, ಚಿರತೆ, ನಾನಾರೀತಿಯ ಸರಿಸೃಪಗಳು, ಹಲವು ಪ್ರಭೇದದ ಪ್ರಾಣಿ, ಪಕ್ಷಿಗಳು ಇಲ್ಲಿ ನೆಲಸಿವೆ.  ವಿಶ್ವದ ಅಪರೂಪದ ಮೀನು ಸಂಕುಲ ಮಹಶಿರ್ ಮೀನಿನ ತಳಿಇಲ್ಲಿ ಹರಿಯುವ ಕಾವೇರಿನದಿಯಲ್ಲಿ ವಾಸಿಸುತ್ತದೆ. ರಾಮಾಯಣ ಕಾಲದ ಸುಪ್ರಸಿದ್ದ ಮುತ್ತತ್ತಿ ಪುಣ್ಯಕ್ಷೇತ್ರ ಇಲ್ಲಿದೆ. ಅಪರೂಪದ ಹೊಳೆಮತ್ತಿಯಂತಹ ಮರಗಳಿರುವ ಪ್ರದೇಶ ಕೂಡ. ಈ ನಾಡಿನ ಮೂಲ ನಿವಾಸಿಗಳಾದ ಸೋಲಿಗರು, ಕಾಡು,ಜೇನು ಕುರುಬರು, ಇರುಳಿಗರು ಸೇರಿದಂತೆ ನಾನಾ ಆದಿವಾಸಿ ಬುಡಕಟ್ಟು ಸಮುದಾಯಗಳು ಮೇಕೆದಾಟು ಅರಣ್ಯದ ಮೇಲೆ ಅವಲಂಬನೆಗೊಂಡಿವೆ. ಮೇಕೆದಾಟುಗೆ ಅಡ್ಡವಾಗಿ ಆಣೆಕಟ್ಟು ಕಟ್ಟುವುದರಿಂದ  ಇಂತಹದೊಂದು ಅಪರೂಪದ ಪರಿಸರಪ್ರದೇಶವೊಂದು ನಮ್ಮ ಮುಂದೆಯೇ ಕಣ್ಮರೆ ಆಗಲಿದೆ.

ಪಂಚರಾಜ್ಯ ಚುನಾವಣೆ ಘೋಷಣೆ ಸಂದರ್ಭದಲ್ಲಿ ಇತರ ರಾಜಕೀಯ ಪಕ್ಷಗಳು ಕಾಂಗ್ರೆಸನ್ನು  ಪರಿಸರ ವಿರೋಧಿ ಎಂದು ಬಿಂಬಿಸುವ ಸಾಧ್ಯತೆಯೂ ಇದೆ. ಈಗಾಗಲೇ ಪರಿಸರವಾದಿಗಳು ಮಾಡುತ್ತಿರುವ ಪ್ರತಿಭಟನೆಗಳು ಕಾಂಗ್ರೆಸಿಗೆ ಪರಿಸರ ವಿರೋಧಿ ಎಂಬ ಇಮೇಜ್‌ ಅನ್ನು ತಂದುಕೊಡುತ್ತಿವೆ.

ಲೇಖಕರ ಪರಿಚಯ:

ಹುಳ್ಳಿ ಪ್ರಕಾಶ್‌ ಅವರು ಪತ್ರಕರ್ತರು. ಬಳ್ಳಾರಿ ಜಿಲ್ಲೆಯವರು. ಮುಳುಗಡೆ ಪ್ರದೇಶದಿಂದ ಬಂದು ಅದರ ಕಹಿ -ಸಿಹಿ – ನೋವು ಅನುಭವಿಸಿದವರು. ಈ ಕಾರಣದಿಂದಲೇ ಪರಿಸರದ ಬಗ್ಗೆ ಧ್ವನಿಯೆತ್ತುವ ಪತ್ರಕರ್ತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

Continue Reading

ರಾಜಕೀಯ

ಯುಪಿಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿರುವ ಜೆಡಿ(ಯು)

Published

on

By

ನವದೆಹಲಿ, ಜ ೧೭(ಯುಎನ್ ಐ) ಸಂಯುಕ್ತ ಜನತಾ ದಳ(ಜೆಡಿಯು) ಪಕ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ.
ಪಕ್ಷದ ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ. ಈ ಕುರಿತು ಪ್ರತಿಕ್ರಿಯಿಸಿ ನಮ್ಮ ಪಕ್ಷದ ನಾಯಕರು ನಾಳೆ ಲಖನೌದಲ್ಲಿ ಸಭೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಜಂಟಿಯಾಗಿ ಎದುರಿಸಲು ಬಿಜೆಪಿಗೆ ೩೧ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿ(ಯು) ಸಲ್ಲಿಸಿತ್ತು. ಆದರೆ ನಮ್ಮ ಆಹ್ವಾನಕ್ಕೆ ಬಿಜೆಪಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು) ಏಕಾಂಗಿಯಾಗಿ ಕಣಕ್ಕಿಳಿಯುವುದರಿಂದ ಬಿಹಾರದಲ್ಲಿ ಬಿಜೆಪಿ-ಜೆಡಿ(ಯು) ಪಕ್ಷಗಳ ಮೈತ್ರಿಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತ್ಯಾಗಿ ಸ್ಪಷ್ಟಪಡಿಸಿದ್ದಾರೆ.

Continue Reading

ರಾಜಕೀಯ

ನಾರಾಯಣ ಗುರುಗಳಿಗೆ ಎಸಗಿರುವ ಅಪಮಾನ.. “ಹಿಂದು ಹೃದಯ ಸಾಮ್ರಾಟ” ಮೋದಿ ಗಮನಕ್ಕೆ ಬಂದಿಲ್ಲವೇ… ಸಿದ್ದು ಪ್ರಶ್ನೆ

Published

on

By

ಬೆಂಗಳೂರು, ಜ 16(ಯುಎನ್‌ ಐ) ಸಮಾಜ ಸುಧಾರಕ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರದ
ಬಿಜೆಪಿ ನೇತೃತ್ವದ ಸರ್ಕಾರ ದೇಶದ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಮ್ಮ ಮೂಗಿನಡಿಯಲ್ಲಿಯೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಪ್ರತಿಕ್ರಿಯಿಸದೆ
ಇರುವುದು ಆಶ್ಚರ್ಯಕರ.ಇದನ್ನು ಹೇಗೆ ಅರ್ಥೈಸಬೇಕು? ಈ ಅವಮಾನಕ್ಕೆ ಸಹಮತ ಇದೆಯೆಂದೇ? ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್‌ ಗಳಲ್ಲಿ ಪ್ರಶ್ನಿಸಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಪ್ರಾಧಾನ್ಯ ಕೊಟ್ಟು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು
ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರ ಕೈಗೊಂಡೆ. ಇದರಿಂದಾಗಿ
ಇಂದು ರಾಜ್ಯದ ಮೂಲೆ ಮೂಲೆಗೆ ಗುರುಗಳ ಚಿಂತನೆಯ ಸಂದೇಶ ತಲುಪುತ್ತಿದೆ‌ ಎಂಬ ಹೆಮ್ಮೆ ಮತ್ತು
ತೃಪ್ತಿ ನನ್ನದು ಎಂದು ಹೇಳಿದ್ದಾರೆ.

ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ
ಅವಕಾಶ ನಿರಾಕರಿಸಿ ಅವಮಾನಿಸಿರುವುದು ‘ಹಿಂದು ಹೃದಯ ಸಾಮ್ರಾಟ’ ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಇ‌ನ್ನೂ ಬಂದಿಲ್ಲವೇ? ಶತಮಾನದ ಹಿಂದೆಯೇ
ಅಸ್ಪೃಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ದ ಸಿಡಿದೆದ್ದು ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ?
ಅಂತಹ ಅಭಿಪ್ರಾಯವನ್ನು ಬಿಜೆಪಿ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.

Continue Reading
Advertisement
ದೇಶ3 mins ago

ಗಣರಾಜ್ಯೋತ್ಸವಕ್ಕೆ ಈ ಬಾರಿಯ ವಿಶೇಷತೆ ಏನು? ಸಮಗ್ರ ಮಾಹಿತಿ

ಹೊಸದಿಲ್ಲಿ: ಜನೆವರಿ 17 (ಯು.ಎನ್.ಐ.) ಚೀನಾ ಹಾಗೂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಸಂಬಂಧ ಗಣರಾಜ್ಯೋತ್ಸವದಂದು ಈ ಬಾರಿ ಸೇನೆ ಆಗಸದಲ್ಲಿ ತೋಳ್ಬಲ ಪ್ರದರ್ಶನ ಮಾಡಲಿದೆ. ರಫೇಲ್ ಮತ್ತು...

ರಾಜಕೀಯ15 mins ago

ಮೇಕೆದಾಟು ಪಾದಯಾತ್ರೆ; ಕಾಂಗ್ರೆಸಿಗೆ ವರವೋ ಶಾಪವೋ ?

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಅವರು 2023ರ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು, ತಮ್ಮ ವೈಯುಕ್ತಿಕ ಕಾರ್ಯಸೂಚಿ  (ಮೇಕೆದಾಟು ಪಾದಯಾತ್ರೆ ಮೇಲ್ನೊಟಕ್ಕೆ ಎಐಸಿಸಿ ಅನುಮೊದಿತವಾಗಿ ಕಂಡ್ರು ಅದು ಕರ್ನಾಟಕ...

ದೇಶ28 mins ago

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು...

ದೇಶ36 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ1 hour ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ1 hour ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ1 hour ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ2 hours ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ2 hours ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ2 hours ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಟ್ರೆಂಡಿಂಗ್

Share