Connect with us


      
ದೇಶ

ಪ್ರತಿಭಟನೆ ಬಳಿಕ NCPಯ ಶರದ್ ಪವಾರ್ ಪುತ್ರಿಗೆ ಭದ್ರತೆ ಹೆಚ್ಚಳ

Lakshmi Vijaya

Published

on

ಮುಂಬೈ: ಏಪ್ರಿಲ್ 09 (ಯು.ಎನ್.ಐ) ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ನೌಕರರು ಮುಂಬೈನಲ್ಲಿರುವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಶರದ್ ಪವಾರ್ ಪುತ್ರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಎಕ್ಸ್ ವರ್ಗದ ಭದ್ರತೆಯಿಂದ ವೈ ಪ್ಲಸ್ ಭದ್ರತೆ ನೀಡಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಪೆದ್ದರ್ ರಸ್ತೆಯಲ್ಲಿರುವ ಶರದ್ ಪವಾರ್ ಅವರ ಬಂಗಲೆಯ ಹೊರಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಾರಾಮತಿ ಸಂಸದರಾದ ಸುಪ್ರಿಯಾ ಸುಳೆ ಅವರೊಂದಿಗೆ ಪ್ರತಿಭಟನಾಕಾರರು ಅನುಚಿತವಾಗಿ ವರ್ತಿಸಿದ್ದರು.  ಈ ಘಟನೆಯ ನಂತರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವೈ ಪ್ಲಸ್ ಎಸ್ಕಾರ್ಟ್‌ಗೆ ಭದ್ರತೆ ಹೆಚ್ಚಿಸಿದ್ದಾರೆ.

ಇದರೊಂದಿಗೆ ಶರದ್ ಪವಾರ್ ಅವರ ಮುಂಬೈ ನಿವಾಸ ಮತ್ತು ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ಮನೆಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಸಂಬಂಧಿಸಿದಂತೆ 110 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Share