Connect with us


      




ದೇಶ

ತಿರುಪತಿ ನಂತರ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖೇಶ್ ಅಂಬಾನಿ

Lakshmi Vijaya

Published

on

ಗುರುವಾಯೂರು:ಸೆಪ್ಟೆಂಬರ್ 17 (ಯು.ಎನ್.ಐ.)  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಖೇಶ್ ಅಂಬಾನಿ ಟೆಂಪಲ್ ರನ್ ಮಾಡ್ತಿದ್ದಾರೆ.  ತಿರುಪತಿಗೆ ಭೇಟಿ ಬಳಿಕ ಇಂದು ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಖೇಶ್ ಅಂಬಾನಿ ಗುರುವಾಯೂರ್ ದೇವಾಲಯವನ್ನು ಪ್ರವೇಶಿಸುವ ವೇಳೆ ಅಲ್ಲಿನ ನಿಯಮದಂತೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಅನುಸರಿಸಿದರು.

ಗುರುವಾಯೂರ್ ದೇವಾಲಯವು ಭಗವಾನ್ ವಿಷ್ಣುವಿನ ರೂಪವಾದ ಗುರುವಾಯೂರಪ್ಪನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಕೇರಳದ ಗುರುವಾಯೂರ್ ಪಟ್ಟಣದಲ್ಲಿದೆ. ಈ ದೇವಾಲಯವು ಕೇರಳ ಮತ್ತು ತಮಿಳುನಾಡಿನ ಹಿಂದೂಗಳ ಪ್ರಮುಖ ಪೂಜಾ ಸ್ಥಳವಾಗಿದೆ.

ಈ ಸುದ್ದಿಯನ್ನೂ ಓದಿ: ಈ ಶಾಲೆಯ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿ ಶಿಕ್ಷಕಿ ಸಾವು!

ಮುಖೇಶ್ ಅಂಬಾನಿ ನಿನ್ನೆ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದರು. ಅವರ ಪುತ್ರ ಅನಂತ್ ಅವರ ಫಿಯಾನ್ಸಿ ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಜೊತೆಗಿದ್ದರು.

ಈ ವಾರದ ಆರಂಭದಲ್ಲಿ ಸೋಮವಾರ ಮುಕೇಶ್ ಅಂಬಾನಿ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

Share