Published
6 months agoon
By
Vanitha Jainಆಗ್ರಾ: ಜನವರಿ 03(ಯು.ಎನ್.ಐ) ಉತ್ತರ ಪ್ರದೇಶದ ಆಗ್ರಾದ ಧನೋಲಿ, ಅಜೀಜ್ಪುರ ಮತ್ತು ಸಿರೋಲಿ ಗ್ರಾಮಗಳಲ್ಲಿ ರಸ್ತೆ ಮತ್ತು ಸರಿಯಾದ ಒಳಚರಂಡಿ ವ್ಯವಸ್ಥೆಗೆ ಒತ್ತಾಯಿಸಿ 81 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರಾಣಿ ದೇವಿ ಪ್ರತಿಭಟನಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ರಾಣಿ ಪಕ್ಕದಲ್ಲಿ ಮಲಗಿದ್ದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇನ್ನೊಬ್ಬ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಕಳೆದ 81 ದಿನಗಳಿಂದ ಈ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಘೋಷಣೆ ಕೂಗಿ, ಜಲಾವೃತ ರಸ್ತೆಗಳಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ನಡೆಸಿ, ಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸಿ ಭಿತ್ತಿಪತ್ರಗಳನ್ನು ಹಾಕಿದ್ದಾರೆ. ಅವರಲ್ಲಿ ಕೆಲವರು ತಮ್ಮ ಮನೆಗಳ ಗೋಡೆಗಳ ಮೇಲೆ ಬ್ಯಾನರ್ಗಳನ್ನು ಅಂಟಿಸಿದರು.
ರಾಣಿ, 48, ಮಲ್ಪುರ ಪೆÇಲೀಸ್ ಠಾಣೆ ವ್ಯಾಪ್ತಿಯ ವಿಕಾಸ್ ನಗರದ ನಿವಾಸಿ. ಅಕ್ಟೋಬರ್ 13 ರಿಂದ ಸಿರೋಲಿ-ಧನೋಲಿ ರಸ್ತೆಯ ಪ್ರತಿಭಟನಾ ಸ್ಥಳದಲ್ಲಿ ನಿಯಮಿತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರು ತಮ್ಮ 22 ವರ್ಷದ ಮಗ ನೀರಜ್ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಚಪ್ಪಲಿ ತಯಾರಿಕಾ ಘಟಕದ ಕೂಲಿ ಕಾರ್ಮಿಕ ನೀರಜ್ ಮಾತನಾಡಿ, ‘ಪ್ರತಿಭಟನಾ ಸ್ಥಳಕ್ಕೆ ರಾತ್ರಿ ವೇಳೆ ಹೋಗಬೇಡಿ ಎಂದು ನನ್ನ ತಾಯಿಗೆ ಹೇಳುತ್ತಿದ್ದೆ ಆದರೆ ಅವರು ಹಠ ಹಿಡಿದಿದ್ದರು, ಶನಿವಾರ ಅಲ್ಲೇ ಮಲಗಿದ್ದರು, ಭಾನುವಾರ ಬೆಳಿಗ್ಗೆ ಟೀ ಕೊಡಲು ಹೋದಾಗ ಎದ್ದಿರಲಿಲ್ಲ. ದೇಹವು ತಣ್ಣಗಾಗಿತ್ತು. ವೈದ್ಯರು ಬಂದು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ಹೇಳಿದರು. ನನ್ನ ತಾಯಿ ಸಾವಿಗೆ ಜಿಲ್ಲಾಡಳಿತವೇ ಹೊಣೆ ಎಂದು ದುರಿದರು.
ಪ್ರತಿಭಟನಾ ಸ್ಥಳದಲ್ಲಿಯೇ ರಾಣಿ ಮೃತಪಟ್ಟಿರುವುದನ್ನು ದೃಢಪಡಿಸಿದ ಎಸ್ಡಿಎಂ ಲಕ್ಷ್ಮಿ ಎನ್. “ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಸರ್ಕಾರದ ಇತರ ಯೋಜನೆಗಳ ಅಡಿಯಲ್ಲಿ ಕೆಲವು ಆರ್ಥಿಕ ನೆರವು ನೀಡಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಮತ್ತೋರ್ವ ಮಹಿಳೆ 85 ವರ್ಷದ ಕೀರ್ತಿ ದೇವಿ. ಡಿಸೆಂಬರ್ 5 ರಂದು, ಕೀರ್ತಿ, ಚೌಧರಿ ಪ್ರೇಮ್ ಸಿಂಗ್ ಎಂಬಾತನೊಂದಿಗೆ ಪ್ರತಿಭಟನಾ ಸ್ಥಳದ ಬಳಿ ಭೂಮಿಯನ್ನು ಅಗೆದು ಧರಣಿ ಪ್ರತಿಭಟನೆ ನಡೆಸಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!