Published
3 weeks agoon
By
Vanitha Jainಬೆಂಗಳೂರು: ಏಪ್ರಿಲ್ 27 (ಯು.ಎನ್. ಐ.) ಅಕ್ಷಯ ತೃತೀಯ ಸಂದರ್ಭದಲ್ಲಿ ಎಲ್ಲರೂ ಬಂಗಾರ ಖರೀದಿಸುವುದು, ಖರೀದಿದಾರರಿಗೆ ವಿಶೇಷ ಬಹುಮಾನ ನೀಡುವುದು ಸಾಮಾನ್ಯ. ಆದರೆ, ರೈತರ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಅಗ್ರಿಫೈ ಸ್ಟಾರ್ಟ್ಅಪ್ ಒಂದು ಹೆಜ್ಜೆ ಮುಂದೆ ಹೋಗಿ ರೈತರಿಗೆ ಗೋಲ್ಡ್ ಕಾಯಿನ್ ನೀಡಿ ಪುರಸ್ಕರಿಸಿದೆ.
ಅಗ್ರಿಫೈ (Agrifi) ಬಳಿ ಪೆಸ್ಟಿಸೈಡ್ಸ್ ಮತ್ತು ರಸಗೊಬ್ಬರ ಖರೀದಿಸುವಂತಹ ರೈತರಿಗಾಗಿ ಯುಗಾದಿ ಸೇಲ್ ಏರ್ಪಡಿಸಲಾಗಿತ್ತು. ಇದರಲ್ಲಿ ಆಯ್ಕೆಯಾದಂತಹ ಇಬ್ಬರು ರೈತರಿಗೆ ಗೋಲ್ಡ್ ಕಾಯಿನ್ ನೀಡಿ ಪ್ರೋತ್ಸಾಹಿಸಲಾಗಿದೆ.
ಯಲಹಂಕ ಸಮೀಪದ ರಾಜಾನುಕುಂಟೆ ಬಳಿ ನಡೆದ ಕಾರ್ಯಕ್ರಮದಲ್ಲಿ ಅಗ್ರಿಫೈ ಸಂಸ್ಥೆಯಿಂದ ಪ್ರಗತಿಪರ ರೈತ ರಂಜಿತ್ ಅವರಿಗೆ 3 ಗ್ರಾಂ ಗೋಲ್ಡ್ ಕಾಯಿನ್ ಹಾಗೂ ರಮಣರೆಡ್ಡಿ ಅವರಿಗೆ 1 ಗ್ರಾಂ ಗೋಲ್ಡ್ ಕಾಯಿನ್ ನೀಡಿ ಅಭಿನಂದಿಸಲಾಗಿದೆ. ಇದಲ್ಲದೆ, ಉಳಿದಂತೆ ಹಲವು ರೈತರಿಗೆ ಕೃಷಿ ಬೆಳೆಗಳಿಗೆ ರಸಾಯನಿಕ ಸಿಂಪಡಿಸುವ ಸ್ಪ್ರೇ ಸಹಿತ ಹಲವು ಬಹುಮಾನಗಳನ್ನು ನೀಡಲಾಗಿದೆ.
‘ಅಗ್ರಿಫೈ ಸಂಸ್ಥೆ KrishiKhata ಆ್ಯಪ್ ಮೂಲಕ ರೈತರಿಗೆ ಸಕಾಲಕ್ಕೆ ಕೃಷಿ ಸಾಲ ಮತ್ತು ಅಗ್ರಿ ಟ್ರೇಡರ್ಗಳಿಗೆ ಸುಲಭವಾಗಿ ಸಾಲದ ನೆರವು ಒದಗಿಸುವ ಮೂಲಕ ಅವರ ವ್ಯಾಪಾರ ಉದ್ದಿಮೆ ಬೆಳವಣಿಗೆಗೆ ಕಾರ್ಯನಿರ್ವಹಿಸಲಾಗುತ್ತಿದೆ. ಈಗ ಕೃಷಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವರ ಮನೆಬಾಗಿಲಿಗೆ ಇನ್ಪುಟ್ಗಳನ್ನು ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅದರಲ್ಲಿ ಆಯ್ಕೆಯಾದಂತಹ ಪ್ರಗತಿಪರ ರೈತರಿಗೆ ಗೋಲ್ಡ್ ಕಾಯಿನ್ ಸಿಕ್ಕಿದೆ’ ಎಂದು ಅಗ್ರಿನ್ನೋವ್ ಟೆಕ್ನಾಲಜೀಸ್ ಲಿಮಿಟೆಡ್ ಸಹ ಸ್ಥಾಪಕ ರಘುಚಂದ್ರ ತಿಳಿಸಿದರು.
‘ಅಗ್ರಿಫೈ ದಕ್ಷಿಣ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ತನ್ನ ಕಾರ್ಯವ್ಯಾಪ್ತಿ ಹೊಂದಿತ್ತು. ಈಗ ರಾಜ್ಯದ ಯಾವುದೇ ಭಾಗದ ರೈತರು ಕೃಷಿ ಸಾಲ ಅಥವಾ ಇನ್ಪುಟ್ ಸಲುವಾಗಿ KrishiKhata ಆ್ಯಪ್ ಬಳಸಬಹುದು. ರೈತನ ಮನೆಬಾಗಿಲಿಗೇ ನಾವು ತಲುಪಿ ಸೌಲಭ್ಯಗಳನ್ನು ಒದಗಿಸುತ್ತೇವೆ’ ಎಂದು ಅಗ್ರಿಫೈ ಸ್ಥಾಪಕ ಮತ್ತು ಸಿಇಓ ಅಭಿಲಾಶ್ ತಿರುಪತಿ ಹೇಳಿದರು.