Connect with us


      




ಆರೋಗ್ಯ

ದಾದಿಯರಿಗೆ ವಂದಿಸಿದ ರಾಹುಲ್‌ ಗಾಂಧಿ

Kumara Raitha

Published

on

ಬೆಂಗಳೂರು: ಮೇ ೧೨ (ಯು.ಎನ್.‌ಐ.) ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ನಮ್ಮ ದಾದಿಯರನ್ನು ನಾನು ವಂದಿಸುತ್ತೇನೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಈ ಸಂಬಂಧ ಅವರಿಂದು ಟ್ವೀಟ್‌ ಮಾಡಿದ್ದು ದಾದಿಯರ ಜೊತೆಗೆ ತಾವು ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ದಾದಿಯರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಭಾರತೀಯರನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಜೀವಗಳನ್ನು ಉಳಿಸುತ್ತದೆ. ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇಂದು ನರ್ಸ್‌ಗಳ ದಿನ. ಭಾರತದಲ್ಲಿ ಪ್ರತಿವರ್ಷ ಮೇ ೧೨ರಂದು ದಾದಿಯರ ದಿನವಾಗಿ ಆಚರಿಸಲ್ಪಡುತ್ತದೆ.

 

Share