Connect with us


      
ರಾಜಕೀಯ

ಅಖಿಲೇಶ್ ಯಾದವ್ ವಿರುದ್ಧ ಜೆಪಿ ನಡ್ಡಾ ವಾಗ್ದಾಳಿ

Vanitha Jain

Published

on

ಲಕ್ನೋ: ಜನವರಿ 03(ಯು.ಎನ್.ಐ) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಉತ್ತರ ಪ್ರದೇಶದ ಬಸ್ತಿಯಲ್ಲಿ ವಾಗ್ದಾಳಿ ನಡೆಸಿದರು.

ಅಖಿಲೇಶ್ ಯಾದವ್ 15 ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಕಿಡಿ ಕಾರಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಬಸ್ತಿಯಲ್ಲಿ ಜನ ವಿಶ್ವಾಸ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖ್ಯಸ್ಥರು, ಅಖಿಲೇಶ್ ಯಾದವ್ ಜೀ, ನೀವು 15 ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದೀರಿ, ಆದರೆ ನ್ಯಾಯಾಲಯವು ಅದಕ್ಕೆ ಅವಕಾಶ ನೀಡಲಿಲ್ಲ. ನಾಲ್ಕು ಮಂದಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಖಿಲೇಶ್ ಜೀ, ಇದು ನಿಮ್ಮ ನಿಜವಾದ ಮುಖ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, “ನಮ್ಮದು ಸೈದ್ಧಾಂತಿಕ ಪಕ್ಷ. ನಾವು ಇಲ್ಲಿ ಆಡಳಿತ ನಡೆಸಲು ಅಲ್ಲ, ನಮ್ಮ ಸಿದ್ಧಾಂತವನ್ನು ಜಾರಿಗೆ ತರಲು ಬಂದಿದ್ದೇವೆ” ಎಂದು ಹೇಳಿದರು.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮಾಡಿದ ತಪ್ಪಿನಿಂದಾಗಿ ಭಾರತವು 70 ವರ್ಷಗಳ ಕಾಲ 370ನೇ ವಿಧಿಯನ್ನು ಮುಂದುವರೆಸಬೇಕಾಯಿತು. ಇದು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಅಡ್ಡಿಯಾಗಿತ್ತು” ಎಂದು ಅವರು ಹೇಳಿದರು.

Share