Published
6 months agoon
By
Vanitha Jainಮುಂಬೈ: ಜನವರಿ 04(ಯು.ಎನ್.ಐ) ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಜೀವನಾಧಾರಿತ ಐತಿಹಾಸಿಕ ಸಿನಿಮಾ ಪೃಥ್ವಿರಾಜ್ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.
ಜನವರಿ 21 ರಂದು ಈ ಸಿನಿಮಾವನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ನಲ್ಲಿ ಜನವರಿ 21 ರಂದು ಬಿಡುಗಡೆಯಾಗಬೇಕಿದ್ದ ‘ಪೃಥ್ವಿರಾಜ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಆದರೆ ಯಶ್ ರಾಜ್ ಫಿಲ್ಮ್ಸ್ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
ಚಂದ್ರಪ್ರಕಾಶ್ ದ್ವಿವೇದಿ ಬರೆದು ನಿರ್ದೇಶಿಸಿದ ಪೃಥ್ವಿರಾಜ್ “ಭಾರತದ ಕೆಚ್ಚೆದೆಯ ಸಾಮ್ರಾಟ್ನ ಶೌರ್ಯ” ಬಿಂಬಿಸುತ್ತದೆ. ಪೃಥ್ವಿರಾಜ್ ಚೌಹಾಣ್ ಇಂದಿನ ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳನ್ನು ಆಳಿದ ಧೀರ.
ನಟ ಅಕ್ಷಯ್ ಕುಮಾರ್, ಐತಿಹಾಸಿಕ ಸಿನಿಮಾವನ್ನು ಯೋಧನ ವೀರತೆ ಮತ್ತು ಜೀವನಕ್ಕೆ ಸಂದ ಗೌರವ ಎಂದು ಕರೆದಿದ್ದರು. “ನಾನು ಪೃಥ್ವಿರಾಜ್ ಚೌಹಾಣ್ ಬಗ್ಗೆ ಹೆಚ್ಚು ಓದಿದ್ದೇನೆ, ತನ್ನ ದೇಶ ಮತ್ತು ಮೌಲ್ಯಗಳಿಗಾಗಿ ತನ್ನ ಅದ್ಭುತ ಜೀವನದ ಪ್ರತಿ ಸೆಕೆಂಡ್ ಅನ್ನು ಹೇಗೆ ಬದುಕುತ್ತಾನೆ ಮತ್ತು ಉಸಿರಾಡುತ್ತಾನೆ ಎಂಬುದರ ಬಗ್ಗೆ ನಾನು ಹೆಚ್ಚು ವಿಸ್ಮಯಗೊಂಡಿದ್ದೇನೆ” ಎಂದು ನಟ ಈ ಹಿಂದೆ ಹೇಳಿದ್ದರು.
ಪೃಥ್ವಿರಾಜ್ ಸಿನಿಮಾ ಮೂಲಕ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಸೋನು ಸೂದ್, ಸಂಜಯ್ ದತ್, ಅಶುತೋμï ರಾಣಾ, ಸಾಕ್ಷಿ ತನ್ವರ್, ಮಾನವ್ ವಿಜ್ ಮತ್ತು ಲಲಿತ್ ತಿವಾರಿ ಸಹ ನಟಿಸಿದ್ದಾರೆ.
ಪೃಥ್ವಿರಾಜ್ ಹೊರತಾಗಿ, ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಮತ್ತು ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಬಿಡುಗಡೆಯನ್ನು ಸಹ ಮುಂದೂಡಲಾಗಿದೆ.