Connect with us


      
ಸಿನೆಮಾ

ನಗ್ನ ಪೋಸ್ ನೀಡಿ ಟ್ರೋಲ್ ಆಗುತ್ತಿರುವ ರಣವೀರ್ ಸಿಂಗ್ ಬಗ್ಗೆ ಆಲಿಯಾ ಹೇಳಿದ್ದೇನು?

Lakshmi Vijaya

Published

on

ಮುಂಬೈ: ಜುಲೈ 25 (ಯು.ಎನ್.ಐ.) ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ಟ್ರೋಲ್ ಆಗ್ತಿರುವ ನಟ ರಣವೀರ್ ಸಿಂಗ್ ಬಗ್ಗೆ ನಟಿ ಆಲಿಯಾ ಭಟ್ ಏನ್ ಹೇಳಿದರು ಗೊತ್ತಾ?. ತಮ್ಮ ಅಭಿನಯದ ಡಾರ್ಲಿಂಗ್ಸ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು ರಣವೀರ್ ಸಿಂಗ್ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಆಲಿಯಾ, ರಣವೀರ್ ಸಿಂಗ್  ಜೊತೆ ನಟಿಸಿದ್ದಾರೆ. ತಮ್ಮ ಸಹನಟರು ಮ್ಯಾಗಜಿನ್‌ಗಾಗಿ ನಗ್ನ ಪೋಸ್ ನೀಡಿದ ಬಗ್ಗೆ ಮತ್ತು ಅದಕ್ಕಾಗಿ ಟ್ರೋಲ್ ಆಗಿರುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನಟಿಯನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಆಲಿಯಾ ಭಟ್ ನನ್ನ ನೆಚ್ಚಿನ ರಣವೀರ್ ಸಿಂಗ್ ಬಗ್ಗೆ ನಕಾರಾತ್ಮಕವಾಗಿ ಹೇಳುವುದು ನನಗೆ ಇಷ್ಟವಿಲ್ಲ. ಇಂತಹ  ಪ್ರಶ್ನೆಯೇ ನನಗೆ ಸಹಿಸಲಾಗದ ವಿಷಯ.  ನಾನು ಅವರನ್ನು ಪ್ರೀತಿಸುತ್ತೇನೆ, ಅವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ಶಾಶ್ವತವಾಗಿ ಅಚ್ಚುಮೆಚ್ಚಿನವರು. ಅವರು ನಮಗೆ ಚಲನಚಿತ್ರಗಳ ಮೂಲಕ ತುಂಬಾ ನೀಡಿದ್ದಾನೆ. ನಾವು ಅವರಿಗೆ ಪ್ರೀತಿಯನ್ನು ಮಾತ್ರ ನೀಡಬೇಕು ಎಂದರು.

ಜೋಯಾ ಅಖ್ತರ್ ಅವರ 2019 ರ ಚಿತ್ರ ಗಲ್ಲಿ ಬಾಯ್ ನಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್  ನಟಿಸಿದ್ದರು.  ಅವರು ಮುಂದೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಅನುಭವಿಗಳಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಸಹ ನಟಿಸಿದ್ದಾರೆ. ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ 7 ರ ಮೊದಲ ಸಂಚಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

Share