Connect with us


      
ಸಾಮಾನ್ಯ

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಭಾರತದ ಚಿನ್ನದ ಬರ ಈಡೇರುತ್ತಾ?

Iranna Anchatageri

Published

on

ಬರ್ಮಿಂಗ್ಹ್ಯಾಮ್: ಮಾರ್ಚ್ 16 (ಯು.ಎನ್.ಐ.) ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಇಂದಿನಿಂದ ಆರಂಭವಾಗಲಿದೆ. ಎರಡು ದಶಕಗಳಿಂದ ಈ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿಗಾಗಿ ಕಾಯುತ್ತಿದೆ. ಕಳೆದ 21 ವರ್ಷಗಳಲ್ಲಿ ಯಾವುದೇ ಭಾರತೀಯ ಆಟಗಾರರು ಇಲ್ಲಿ ಚಿನ್ನದ ಪದಕ ಗೆದ್ದಿಲ್ಲ. ಈ ಬಾರಿ ಎಲ್ಲರ ಕಣ್ಣುಗಳು ಬ್ಯಾಡ್ಮಿಂಟನ್ ಆಟಗಾರ್ತಿ ಲಕ್ಷ್ಯ ಸೇನ್, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರರಾದ ಸಿಂಧು, ಸೈನಾ ನೆಹ್ವಾಲ್ ಮತ್ತು ಶ್ರೀಕಾಂತ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವಲ್ಲಿ ಈವರೆಗೆ ವಿಫಲರಾಗಿದ್ದಾರೆ. ಪುಲ್ಲೇಲ ಗೋಪಿಚಂದ್ (2001) ಮತ್ತು ಪ್ರಕಾಶ್ ಪಡುಕೋಣೆ (1980) ಮಾತ್ರ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.

Share