Connect with us


      




ಕರ್ನಾಟಕ

ಬೆಂಗಳೂರು ಪೊಲೀಸ್ ಕಮಿಷನರ್ ಸ್ಥಾನಕ್ಕೆ ಮತ್ತೆ ಅಲೋಕ್ ಕುಮಾರ್?

Lakshmi Vijaya

Published

on

ಬೆಂಗಳೂರು: ಏಪ್ರಿಲ್ 20 (ಯು.ಎನ್.ಐ.) ಖಡಕ್ ಕಾಪ್ ಎಂದೇ ಖ್ಯಾತಿ ಗಳಿಸಿರೋ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಮತ್ತೊಮ್ಮೆ ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿ ನೇಮಕವಾಗಲಿದ್ದಾರ? ಹೀಗೊಂದು ಪ್ರಶ್ನೆ ಇದೀಗ ದಟ್ಟವಾಗ್ತಿದೆ.   ವಿವಿಧ ವರದಿಗಳ ಪ್ರಕಾರ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ಹೊಸ ಪೊಲೀಸ್ ಕಮಿಷನರ್ ಆಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ.

ಸಾಮಾನ್ಯವಾಗಿ, ಬೆಂಗಳೂರಿನ ಪೊಲೀಸ್ ಕಮಿಷನರ್‌ಗಳನ್ನು ಪ್ರತಿ ವರ್ಷ ಬದಲಾಯಿಸಲಾಗುತ್ತದೆ. ಆದಾಗ್ಯೂ ಕೋವಿಡ್ 19 ಸಂಬಂಧಿತ ನಿರ್ಬಂಧಗಳಿಂದಾಗಿ ಕಮಲ್ ಪಂತ್ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.

ಜೊತೆಗೆ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಿಂದಲೂ ಪೊಲೀಸ್ ಕಮಿಷನರ್ ಬದಲಾವಣೆಗೆ ಅಡ್ಡಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಕಮಲ್ ಪಂತ್ ಅವರು ಕರ್ನಾಟಕ ಕೇಡರ್‌ನ 1990 ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರ ಬ್ಯಾಚ್ ಮೇಟ್ ಭಾಸ್ಕರ್ ರಾವ್ ಅವರ ಉತ್ತರಾಧಿಕಾರಿಯಾಗಿ 2020 ರ ಮಧ್ಯದಲ್ಲಿ ಬೆಂಗಳೂರು ಪೊಲೀಸ್‌ನ 34 ನೇ ಕಮಿಷನರ್ ಆಗಿ ಕಮಲ್ ಪಂಥ್ ಅವರನ್ನ ನೇಮಿಸಲಾಯಿತು. ಕಮಲ್ ಪಂತ್ ಅವರು ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ಮಾತ್ರ ಎಂದು ಸೀಮಿತವಾಗಿರುವ ಬೆಂಗಳೂರು ಪೊಲೀಸರ್ ಕಮಿಷನರ್ ಹುದ್ದೆಯಲ್ಲಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ.  ಹೀಗಾಗಿ ಅವರನ್ನು ಬದಲಾಯಿಸುವ ಮಾತು ಸರ್ಕಾರದಲ್ಲಿ ಪುನರಾರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆರು ತಿಂಗಳ ಹಿಂದಿನ ವರದಿಗಳ ಪ್ರಕಾರ, ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ದಯಾನಂದ ಅವರು ಕಮಲ್ ಪಂತ್ ನಂತರ ಪೊಲೀಸ್ ಕಮಿಷನರ್ ಆಗಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಮುಂದಿನ ವರ್ಷ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಗತ್ಯವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಅಲೋಕ್ ಕುಮಾರ್ ಅವರನ್ನು ಈ ಸ್ಥಾನಕ್ಕೆ ಪರಿಗಣಿಸುತ್ತಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಫೋನ್ ಟ್ಯಾಪ್ ಆರೋಪದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಸುದೀರ್ಘ ಅಧಿಕಾರಾವಧಿಯ ನಂತರ ಅಲೋಕ್ ಕುಮಾರ್ ಪೊಲೀಸ್ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಗೆ ವರ್ಗಾಯಿಸಲಾಯಿತು.

Share