Connect with us


      




ವಿದೇಶ

ಸೌದಿ ತೈಲ ಸ್ಥಾವರದ ಮೇಲೆ ಹೌತಿ ದಾಳಿ ಖಂಡಿಸಿದ ಅಮೆರಿಕ

Iranna Anchatageri

Published

on

ವಾಷಿಂಗ್ಟನ್: ಮಾರ್ಚ್ 26 (ಯುಎನ್‌ಐ/ಸ್ಪುಟ್ನಿಕ್) ಸೌದಿ ಅರೇಬಿಯಾದ ಹೌತಿ ದಾಳಿಯನ್ನು ಖಂಡಿಸುವುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೇಕ್ ಸುಲ್ಲಿವಾನ್ ಸುದ್ದಿಗೋಷ್ಠಿಯಲ್ಲಿ “ಸೌದಿ ಅರೇಬಿಯಾದಲ್ಲಿ ಮೂಲ ಸೌಕರ್ಯಗಳನ್ನೊಳಗೊಂಡ ನಾಗರಿಕ ಪ್ರದೇಶಗಳ ಮೇಲೆ ಹೌತಿಗಳ ದಾಳಿಯನ್ನು ನಾವು ಖಂಡಿಸುತ್ತೇವೆ. ಸೌದಿ ಅರೇಬಿಯಾದ ಸರ್ಕಾರಿ ತೈಲ ಕಂಪನಿ ಅರಾಮ್ಕೊದ ಜೆಡ್ಡಾ ತೈಲ ಡಿಪೋ ಸೇರಿದಂತೆ ಜಿಜಾನ್, ನಜ್ರಾನ್ ಮತ್ತು ಧಹ್ರಾನ್‌ಗಳಲ್ಲಿ ಹೌತಿ ದಾಳಿ ನಡೆಸುತ್ತಿದೆ. ಈ ದಾಳಿಯು ಯೆಮೆನ್ ಜನರನ್ನು ಹೆಚ್ಚು ಸಂಕಷ್ಟಕ್ಕೆ ದೂಡುವ ಉದ್ದೇಶದಿಂದ ಮಾಡಿದ ಭಯೋತ್ಪಾದಕ ಕೃತ್ಯವಾಗಿದೆ” ಎಂದು ತಿಳಿಸಿದ್ದಾರೆ.

“ವಿಶ್ವಸಂಸ್ಥೆಯ ಮೂಲಕ ಸಂಘರ್ಷವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹೌತಿ ದಾಳಿಯಿಂದ ರಕ್ಷಣೆ ಮಾಡುವ ಮಿತ್ರರಾಷ್ಟ್ರಗಳನ್ನು ಬೆಂಬಲಿಸುವುದನ್ನು ಅಮೆರಿಕ ಮುಂದುವರಿಸುತ್ತದೆ” ಎಂದು ಸುಲ್ಲಿವನ್ ಹೇಳಿದ್ದಾರೆ.

“ಯೆಮನ್‌ಗೆ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳನ್ನು ಉಲ್ಲಂಘಿಸಿ ದಾಳಿಗಳನ್ನು ಇರಾನ್ ಮಾಡುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಅರೇಬಿಯನ್ ಗ್ರ್ಯಾಂಡ್ ಪ್ರಿಕ್ಸ್ ಆತಿಥ್ಯ

ಜೆಡ್ಡಾದಲ್ಲಿ ಫಾರ್ಮುಲಾ ಒನ್ ಸೌದಿ ಅರೇಬಿಯನ್ ಗ್ರ್ಯಾಂಡ್ ಪ್ರಿಕ್ಸ್ ಆತಿಥ್ಯ ವಹಿಸುತ್ತಿರುವಾಗ ಈ ದಾಳಿ ನಡೆದಿದೆ. ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟದೊಂದಿಗೆ ಹೋರಾಡುತ್ತಿರುವ ಇರಾನ್ ಪ್ರಾಯೋಜಿತ ಹೌತಿಗಳು, ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸೌದಿ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಹೌತಿ ಬಂಡುಕೋರರು ಶುಕ್ರವಾರ ಜೆಡ್ಡಾದಲ್ಲಿರುವ ಅರಾಮ್ಕೊದ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದ್ದರು. ಇದರಿಂದ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿ ಸಾಕಷ್ಟು ನಷ್ಟ ಉಂಟಾಗಿತ್ತು. 

Share