Published
6 months agoon
ನ್ಯೂಯಾರ್ಕ್: ಜನೆವರಿ 07 (ಯು.ಎನ್.ಐ.) ಒಮೈಕ್ರಾನ್ ರೂಪಾಂತರವು ಸೌಮ್ಯ ಎಂದು ಹೇಳಲಾಗಿದ್ದರೂ ಅಮೆರಿಕಾದಾದ್ಯಂತ ಬಹುವೇಗವಾಗಿ ಸ್ಫೋಟಕದ ಮಾದರಿಯಲ್ಲಿ ಹರಡುತ್ತಿದೆ. ಕೋವಿಡ್ ರೋಗಿಗಳ ಆಸ್ಪತ್ರೆ ದಾಖಲಾತಿ ವಿಷಯದಲ್ಲಿ ಹಿಂದಿನ ಎಲ್ಲ ಸಂಖ್ಯೆಗಳನ್ನು ಮೀರಬಹುದು ಎಂದು ಆಸ್ಪತ್ರೆಗಳು ಅಂದಾಜಿಸಿವೆ.
ದೇಶಾದ್ಯಂತ ಹಲವಾರು ಸೌಲಭ್ಯಗಳ ಮಾದರಿಗಳ ಪ್ರಕಾರ, ಮುಂದಿನ ತಿಂಗಳು ಕೋವಿಡ್-ಸಂಬಂಧಿತ ಹಾಸಿಗೆ ಬೇಡಿಕೆಯಲ್ಲಿ ನಿರಂತರ ಏರಿಕೆ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಸಜ್ಜಾಗಿವೆ.
ಕನೆಕ್ಟಿಕಟ್ನ ಯೇಲ್ ನ್ಯೂ ಹೆವನ್ ಆಸ್ಪತ್ರೆಯಲ್ಲಿ, “2020 ರ ಏಪ್ರಿಲ್ನಲ್ಲಿ ಗರಿಷ್ಠ 451 ಕೋವಿಡ್ ರೋಗಿಗಳು ದಾಖಲಾಗಿದ್ದರು ಎಂದು ಎಂದು 1541 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಯ ನಿರ್ವಹಣೆಯನ್ನು ನೋಡಿಕೊಳ್ಳುವ ರಾಬರ್ಟ್ ಫೋಗೆರ್ಟಿ ಹೇಳಿದ್ದಾರೆ.. ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ವಾರದ ವೇಳೆಗೆ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ತೀವ್ರ ನಿಗಾ ಘಟಕಗಳಲ್ಲಿ ಅತಿಹೆಚ್ಚಿನ ಒತ್ತಡವಿತ್ತು. ಅತಿಹೆಚ್ಚು ರೋಗಿಗಳು ದಾಖಲಾಗುತ್ತಿದ್ರು. ಆಸ್ಪತ್ರೆಗಳ ಐಸಿಯು ಸಾಮರ್ಥ್ಯಕ್ಕಿಂತ ಹೆಚ್ಚಿನ ರೋಗಿಗಳು ಬರುತ್ತಿದ್ದರು. ಅದಕ್ಕೆ ಹೋಲಿಸಿದರೆ ಒಮೈಕ್ರಾನ್ ಸೋಂಕು ತಗುಲಿದ ವ್ಯಕ್ತಿಗಳು ಗಣನೀಯವಾಗಿ ಕಡಿಮೆ ಸಂಖ್ಯೆಯಲ್ಲಿ ತುರ್ತು ನಿಗಾ ಘಟಕಕ್ಕೆ ದಾಖಲಾಗುತ್ತಿದ್ದಾರೆ. ಇದಕ್ಕೆ ಲಸಿಕೆ ಪ್ರಮಾಣ ಹೆಚ್ಚಿರುವುದು ಕಾರಣ ಎಂದು ಹೇಳಲಾಗಿದೆ.
ಹಾಸಿಗೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಆರೋಗ್ಯ ಅಧಿಕಾರಿಗಳು ಹೆಚ್ಚಿನ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೆಪಿಸಿದೆ. ಲಸಿಕೆ ಬೂಸ್ಟರ್ಗಳನ್ನು ಪಡೆಯಲು ಮತ್ತು ಉತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ಧರಿಸಲು ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದೆ.
ಕೋವಿಡ್ ಒಮೈಕ್ರಾನ್ ಹಿನ್ನೆಲೆಯಲ್ಲಿ ಇದು ಅಮೆರಿಕಾದ ಕಠಿಣ ಚಳಿಗಾಲವಾಗಲಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಬಹುದು ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಾಸ್ ಏಂಜಲೀಸ್ನಲ್ಲಿರುವ ಸೀಡರ್ಸ್-ಸಿನಾಯ್ ತನ್ನ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯು ಫೆಬ್ರವರಿ ಮಧ್ಯದವರೆಗೆ ಹೆಚ್ಚಾಗುತ್ತದೆ ಎಂದು ಯೋಜಿಸಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ಆರೋಗ್ಯ ನಿರ್ದೇಶಕ ಗ್ರಾಂಟ್ ಕೋಲ್ಫಾಕ್ಸ್ ಈ ವಾರ ಬ್ರೀಫಿಂಗ್ನಲ್ಲಿ “ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಏರಿಕೆಯಾಗಬಹುದು. ಇದು ಕಳೆದ ಚಳಿಗಾಲದಂತೆಯೇ ಇರಬಹುದು ಎಂದು ಹೇಳಿದ್ದಾರೆ. ಇದನ್ನು ನಿರ್ವಹಿಸಲು ನಾವು ಸಜ್ಜಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಟೆಕ್ಸಾಸ್ನಲ್ಲಿ, ಹೂಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಯ ಪ್ರಕಾರ ತಿಂಗಳ ಅಂತ್ಯದ ವೇಳೆಗೆ ಹೂಸ್ಟನ್ನಲ್ಲಿ ಪ್ರಕರಣಗಳು ಉತ್ತುಂಗಕ್ಕೇರುತ್ತವೆ ಮತ್ತು ಕೋವಿಡ್ ರೋಗಿಗಳ ಹೊರೆ ಪ್ರಸ್ತುತ 680 ರಿಂದ ದಾಖಲೆಯ 850 ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲಿಯೂ ಸಹ ವೈದ್ಯಕೀಯ ಸಿಬ್ಬಂದಿ ಅನಾರೋಗ್ಯವು ಒತ್ತಡವನ್ನು ಹೆಚ್ಚಿಸುತ್ತದೆ: ಆಸ್ಪತ್ರೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಬರ್ಟಾ ಶ್ವಾರ್ಟ್ಜ್ ಪ್ರಕಾರ, ಆರೋಗ್ಯ ವ್ಯವಸ್ಥೆಯ 28,000 ಸಿಬ್ಬಂದಿಗಳಲ್ಲಿ ಸುಮಾರು 10% ರಷ್ಟು ಓಮಿಕ್ರಾನ್ ತರಂಗದ ಸಮಯದಲ್ಲಿ ಧನಾತ್ಮಕ ಪರೀಕ್ಷೆಗೆ ಒಳಗಾಗಿದ್ದಾರೆ.
ಹಲವಾರು ಆಸ್ಪತ್ರೆಗಳ ಸಿಬ್ಬಂದಿ ಪ್ರಕಾರ, ಕೋವಿಡ್ನೊಂದಿಗೆ ಆಸ್ಪತ್ರೆಗೆ ದಾಖಲಾದವರಲ್ಲಿ ಗಮನಾರ್ಹ ಸಂಖ್ಯೆಯವರು ಇತರ ಕಾರಣಗಳಿಗಾಗಿಯೂ ದಾಖಲಾಗಿದ್ದಾರೆ. ಇದರಲ್ಲಿ ಕಡಿಮೆ ತೀವ್ರತೆ ಉಳ್ಳವರೂ ದಾಖಲಾಗಿದ್ದಾರೆ. ಸಿಬ್ಬಂದಿ ತಮ್ಮನ್ನು ಮತ್ತು ಇತರ ರೋಗಿಗಳನ್ನು ರಕ್ಷಿಸಿಕೊಳ್ಳಲು ಕೆಲಸ ಮಾಡುತ್ತಿರುವಾಗ ಒಮೈಕ್ರಾನ್ ಆಸ್ಪತ್ರೆ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ಮಿಚಿಗನ್ ಹೆಲ್ತ್ ವಿಶ್ವವಿದ್ಯಾನಿಲಯದಲ್ಲಿ, ಕಳೆದ ವಾರ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಲು ಶುರುವಾಗಿದೆ. ಮುಂಬರುವ ವಾರಗಳಲ್ಲಿ ಅಂತಿಮವಾಗಿ 50% ಕ್ಕಿಂತ 150 ಕ್ಕೆ ಹೆಚ್ಚಾಗಬಹುದು ಎಂದು ಸಿಸ್ಟಂನ ಕೋವಿಡ್ ಮಾದರಿ ಮುನ್ನಡೆಸುವ ವಿಕಾಸ್ ಪರೇಖ್ ಹೇಳಿದ್ದಾರೆ.
ಇಂಗ್ಲೆಂಡ್ನ ಮುಂದಿನ ಪ್ರಧಾನಿ ಸುಧಾಮೂರ್ತಿ ಅಳಿಯ!?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಇಂದು ರಾಜೀನಾಮೆ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ನ್ಯಾಟೊ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರವಾಗಿ ಅಫ್ಘಾನಿಸ್ತಾನದ ಸ್ಥಾನಮಾನವನ್ನು ರದ್ದುಗೊಳಿಸಲು ಬಿಡೆನ್ ಪತ್ರ
ಇರಾನ್ ಬೆದರಿಕೆ ವಿರುದ್ಧ ಇಸ್ರೇಲ್ಗೆ ಯುಎಸ್ ಬೆಂಬಲ
ಇಟಲಿಯಲ್ಲಿ ಹಿಮನದಿ ಕುಸಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ