Published
5 months agoon
ಅಮೆರಿಕ, ಡಿಸೆಂಬರ್ 12 (ಯು.ಎನ್.ಐ) ಅಮೆರಿಕದ ಕನಿಷ್ಠ 5 ರಾಜ್ಯಗಳಲ್ಲಿ ಚಂಡಮಾರುತದ ಹೊಡೆತಕ್ಕೆ ಅನಾಹುತವೇ ಸಂಭವಿಸಿದೆ. ಕೆಂಟುಕಿ ರಾಜ್ಯದಲ್ಲಿಯೇ, 70 ಜನರು ಸಾವಿಗೀಡಾಗಿದ್ದಾರೆಂಬ ಅಂದಾಜಿಸಲಾಗಿದೆ. ಇನ್ನೂ ಹಲವಾರು ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಮೇ ಫೀಲ್ಡ್ ನಲ್ಲಿ ವಿನಾಶಕಾರಿ ಚಂಡಮಾರುತ
ಮೇಫೀಲ್ಡ್ನಲ್ಲಿ ಕ್ಯಾಂಡಲ್ ಫ್ಯಾಕ್ಟರಿ ಕುಸಿದು 18 ಮಂದಿ ದುರ್ಮರಣಕ್ಕೀಡಾದರೆ, ಇಲಿನಾಯ್ಸ್ ರಾಜ್ಯದಲ್ಲಿ ಅಮೆಜಾನ್ ಕಂಪನಿಯ ಗೋದಾಮು ಕುಸಿದಿದ್ದು, ಸುಮಾರು 100 ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಇದಲ್ಲದೇ ಅರ್ಕಾನ್ಸಾಸ್ನಲ್ಲಿ ನರ್ಸಿಂಗ್ ಹೋಂ ಕಟ್ಟಡ ಕುಸಿದುಬಿದ್ದಿದ್ದು, ಇಬ್ಬರು ಮೃತರಾಗಿದ್ದಾರೆ.
ಚಂಡಮಾರುತದ ವಿನಾಶದ ಕುರಿತಂತೆ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಪ್ರತಿಕ್ರಿಯೆ ನೀಡಿದ್ದು, “ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭಯಾನಕ ಚಂಡಮಾರುತ ಇದಾಗಿದೆ ಅಂತಾ ತಿಳಿಸಿದ್ದಾರೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ರಕ್ಷಣಾ ತಂಡಗಳು ಹಾನಿಗೀಡಾದ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಸಾವಿನ ಸಂಖ್ಯೆ 100 ದಾಟ ಬಹುದಾಗಿದೆ ಎಂದಿರುವ ಅವರು, ಕೆಂಟುಕಿಯಲ್ಲಿ 2 ಮಿಲಿಯನ್ಗಿಂತಲೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ ಅಂತಾ ತಿಳಿಸಿದ್ದಾರೆ.
ಚಂಡಮಾರುತಕ್ಕೆ ಸಿಲುಕಿ ನಗರದಲ್ಲಿ ಬಹುತೇಕ ಎಲ್ಲ ಮನೆಗಳು ನೆಲಸಮಗೊಂಡಿದ್ದು, ಕೆಲವೆಡೆ ಕಬ್ಬಿಣದ ಕಂಬಗಳು ಸಹ ಬಾಗಿದ್ದು, ಭಯ ಹುಟ್ಟಿಸುವಂತಿದೆ. ಇಲ್ಲಿ ಚಂಡಮಾರುತವು ಸುಮಾರು ಗಂಟೆಗೆ 70 mph ವೇಗದಲ್ಲಿ ಆರಂಭ ಕಂಡು, 200 mph ತಲುಪಿತ್ತು ಅಂತಾ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ತಿಳಿಸಿದ್ದಾರೆ.
ಅರ್ಕಾನ್ಸಾಸ್ ರಾಜ್ಯದಲ್ಲಿನ ನರ್ಸಿಂಗ್ ಹೋಮ್ ಕೂಡ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದರಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಇಲಿನಾಯ್ಸ್ನ ಎಡ್ವರ್ಡ್ಸ್ವಿಲ್ಲೆ ಬಳಿ ಅಮೆಜಾನ್ ಗೋದಾಮು ಕುಸಿದುಬಿದ್ದಿದ್ದು, ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ವ್ಯಕ್ತಿಯೊಬ್ಬನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಉತ್ತರ ಅರ್ಕಾನ್ಸಾಸ್ನ ಮೊನೆಟ್ ಮ್ಯಾನರ್ ಪ್ರದೇಶದಲ್ಲಿ ಸುಂಟರಗಾಳಿ ಅಪ್ಪಳಿಸಿದ್ದರಿಂದ ಐವರು ಗಾಯಗೊಂಡಿದ್ದಾರೆ ಮತ್ತು 20 ಮಂದಿ ನಿರಾಶ್ರಿತರಾಗಿದ್ದಾರೆ.
ಮಿಸೌರಿಯಲ್ಲಿ 112 mph ವೇಗದಲ್ಲಿ ಬೀಸಿದ ಗಾಳಿ
ಮಿಸೌರಿ ಪ್ರದೇಶದಲ್ಲಿ ಪ್ರತಿ ಗಂಟೆಗೆ 112 ಎಂಪಿಎಚ್ ವೇಗದಲ್ಲಿ ಗಾಳಿ ಬೀಸಿರುವ ಬಗ್ಗೆ ವರದಿಯಾಗಿದ್ದು, ಸೇಂಟ್ ಚಾರ್ಲ್ಸ್ ಕೌಂಟಿಯ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ, ಆಗಸ್ಟಾ ಮತ್ತು ಮಿಸೌರಿಯಲ್ಲಿ ಹಲವಾರು ಮನೆಗಳು ಕುಸಿದುಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಅಮೆರಿಕದಲ್ಲಿನ ಚಂಡಮಾರುತದ ಬಗ್ಗೆ ಅಧ್ಯಕ್ಷ ಬಿಡೆನ್ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಆಡಳಿತಾಧಿಕಾರಿಗಳಿಗೆ ಸಂಕಷ್ಟದಲ್ಲಿ ಸಿಲುಕಿರುವವರ ನೆರವಿಗೆ ಧಾವಿಸುವಂತೆ ಆದೇಶ ನೀಡಿದ್ದಾರೆ.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!