Connect with us


      




ವಿದೇಶ

ಅಮೆರಿಕದಲ್ಲಿ ಸದ್ದು ಮಾಡಿದ ಬಂದೂಕು, ಮೂವರ ಸಾವು

UNI Kannada

Published

on

ವಾಷಿಂಗ್ಟನ್: ಜನವರಿ 02, (ಯು.ಎನ್.ಐ.) ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ಸಂಚಲನ ಮೂಡಿಸಿದೆ. ಹೊಸ ವರ್ಷಾಚರಣೆಯ ಅಂಗವಾಗಿ ಮಿಸ್ಸಿಸ್ಸಿಪ್ಪಿಯಲ್ಲಿ ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹ್ಯಾರಿಸನ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.

ಮಿಸಿಸಿಪ್ಪಿಯ ಗಲ್ಫ್‌ಪೋರ್ಟ್‌ನಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಲ್ಫ್ ಬಂದರಿನಲ್ಲಿ ನಡೆದ ಪಾರ್ಟಿಯಲ್ಲಿ ಹೊಸ ವರ್ಷಕ್ಕೆ ಒಂದು ನಿಮಿಷ ಮೊದಲು ಈ ಗುಂಡಿನ ದಾಳಿ ನಡೆದಿದೆ. ಕೆಲವು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಸ್ಥಳೀಯರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಲ್ವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ಕೋರಿ ಡುಬೊಯಿಸ್, (23) ಸೆಡ್ರಿಕ್ ಮೆಕ್‌ಕಾರ್ಡ್,( 28) ಮತ್ತು ಆಬ್ರೆ ಲೆವಿಸ್, (22) ಎಂದು ಗುರುತಿಸಲಾಗಿದೆ.

ಇತ್ತ ಪಾಕಿಸ್ತಾನದ ಅಜ್ಮೀರ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ. 11 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

Share