Connect with us


      




ಸಿನೆಮಾ

ಸಿಗರೇಟ್ ಸೇದುತ್ತಿರುವ ಶಿವ, ಪಾರ್ವತಿ ಫೋಟೋ ಹಂಚಿಕೊಂಡ ನಿರ್ದೇಶಕಿ ಲೀನಾ ಮಣಿಮೇಕಲೈ

Vanitha Jain

Published

on

ತಿರುವನಂತಪುರಂ: ಜುಲೈ ೦೭ (ಯು.ಎನ್.ಐ.) ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ವಿವಾದಕ್ಕೆ ಈಡಾಗಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಎಲ್ ಬಿಬಿಟಿಕ್ಯೂ ಧ್ವಜವನ್ನು ಹಿಡಿದಿರುವ ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವುದನ್ನು ಚಿತ್ರಿಸಿರುವ ಕಾಳಿ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದರು.

ಈಗಾಗಲೇ ಅವರ ಮೇಲೆ ಬಿಜೆಪಿ ನಾಯಕ ಸೇರಿ ಹಲವರು ಎಫ್ ಐಆರ್ ದಾಖಲಿಸಿದ್ದಾರೆ. ಇದೀಗ ಶಿವ ಪಾರ್ವತಿ ವೇಷಧಾರಿಗಳು ಸಿಗರೇಟ್ ಸೇದುತ್ತಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದು ಕೋಲಾಹಲವನ್ನೇ ಸೃಷ್ಟಿಸಿದ್ದಾರೆ.

ಫೋಟೋದಲ್ಲಿ, ಒಬ್ಬ ಪುರುಷ ಮತ್ತು ಮಹಿಳೆ, ಸ್ಥಳೀಯ ನಟರು ಶಿವ ಮತ್ತು ಪಾರ್ವತಿ ದೇವಿಯ ವೇಷದಲ್ಲಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಛಾಯಾಚಿತ್ರಕ್ಕೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಹೆಚ್ಚಿನವರು ನಿರ್ದೇಶಕರು ‘ಪ್ರಚಾರಕ್ಕಾಗಿ ಇವನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Share