Connect with us


      
ರಾಜಕೀಯ

ದೆಹಲಿ ರಕ್ಷಣೆ ಮಾಡುವಲ್ಲಿ ಅಮಿತ್ ಶಾ ಫೇಲ್ ಆಗಿದ್ದಾರೆ: ಶರದ್ ಪವಾರ್

Lakshmi Vijaya

Published

on

ಮುಂಬೈ: ಏಪ್ರಿಲ್ 24 (ಯು.ಎನ್.ಐ.) ದೆಹಲಿಯನ್ನು ಕೋಮುಗಲಭೆಗಳಿಂದ ರಕ್ಷಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಾಧ್ಯವಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಶನಿವಾರ ಕಿಡಿಕಾರಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಕೇಂದ್ರ ಗೃಹಸಚಿವರ ವಿರುದ್ಧ ವಾಗ್ದಾಳಿ ಮಾಡಿದರು.

“ಕೆಲವು ದಿನಗಳ ಹಿಂದೆ ಕೋಮು ಉದ್ವಿಗ್ನತೆಯಿಂದಾಗಿ ದೆಹಲಿ ಹೊತ್ತಿ ಉರಿಯುತ್ತಿತ್ತು. ದೆಹಲಿ ರಾಜ್ಯವನ್ನು ಅರವಿಂದ್ ಕೇಜ್ರಿವಾಲ್ ನಿಯಂತ್ರಿಸುತ್ತಾರೆ, ಆದರೆ ದೆಹಲಿ ಪೊಲೀಸ್ ಇಲಾಖೆ ಅಮಿತ್ ಶಾ ನಿರ್ವಹಿಸುವ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಕೋಮು ಗಲಭೆಗಳಿಂದ ನಗರವನ್ನು ರಕ್ಷಿಸಲು ಅಮಿತ್ ಶಾ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.

“ದೆಹಲಿಯಲ್ಲಿ ಏನಾದರೂ ಸಂಭವಿಸಿದರೆ ಆ ಸಂದೇಶವು ಜಗತ್ತಿಗೆ ಹೋಗುತ್ತದೆ. ದೆಹಲಿಯಲ್ಲಿ ಅಶಾಂತಿ ಇದೆ ಎಂದು ಜಗತ್ತು ಊಹಿಸುತ್ತದೆ. ನಿಮಗೆ ಅಧಿಕಾರವಿದೆ, ಆದರೆ ನೀವು ದೆಹಲಿಯನ್ನು ನಿಭಾಯಿಸಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ಮಾಡಿದರು.

ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಕೋಮು ಸಂಘರ್ಷ ಹೆಚ್ಚಾಗಿದೆ ಎಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆದ ಕೋಮು ಹಿಂಸಾಚಾರ ಘಟನೆಗಳನ್ನು ಖಂಡಿಸಿ ಮಾತನಾಡಿದರು.

Share