Connect with us


      
ಸಿನೆಮಾ

‘ಅಮಿತಾಬ್ ಬಚ್ಚನ್ ಒಂದು ಗೊಂಬೆ’ ಎಂದ ರಶ್ಮಿಕಾ ಮಂದಣ್ಣ

Vanitha Jain

Published

on

ಮುಂಬೈ: ಫೆಬ್ರವರಿ 02 (ಯು.ಎನ್.ಐ.) ಸ್ಯಾಂಡಲ್ ವುಡ್ ನಿಂದ ಸಿನಿ ಪಯಣ ಆರಂಭಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್ ಗೂ ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರಾಗೆ ಜೊತೆಯಾಗಿದ್ದಾರೆ. ಈ ಸಿನಿಮಾ ಮೇ ೧೩ರಂದು ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಇನ್ನು ಗುಡ್ ಬೈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅತಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ.

ಹೀಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ, ಅಮಿತಾಬ್ ಬಚ್ಚನ್ ಒಂದು ಗೊಂಬೆ. ಒಬ್ಬ ಅದ್ಭುತ ವ್ಯಕ್ತಿ. ಚಿತ್ರರಂಗದ ದಂತಕಥೆ. ಪ್ರತಿಯೊಬ್ಬರೂ ಆರಾಮಾಗಿರುವಂತಹ ಭಾವನೆಯನ್ನು ನೀಡುತ್ತಾರೆ. ಪ್ರತಿಯೊಂದು ದೃಶ್ಯದ ಚಿತ್ರೀಕರಣವನ್ನು ತಮಾಷೆ ಮೂಲಕ ಅಧ್ಭುತವಾಗಿಸುತ್ತಾರೆ. ಇವರ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ ಎಂದು ಹೇಳಿದ್ದಾರೆ.

ಗುಡ್ ಬೈ ಸಿನಿಮಾವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ ಮತ್ತು ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

Share