Published
5 months agoon
By
Vanitha Jainಹೈದರಾಬಾದ್, ಡಿಸೆಂಬರ್ 09(ಯು.ಎನ್.ಐ): ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳು ಎಂಬ ಆದೇಶವನ್ನು ಜಾರಿಮಾಡಿದ್ದ ಆಂಧ್ರ ಸರ್ಕಾರ ಮತ್ತೆ ವಾಪಾಸ್ ಪಡೆದುಕೊಂಡಿದ್ದೂ ತಿಳಿದ ವಿಚಾರವೇ ಆಗಿದೆ. ಆದರೆ ಈಗ ಮತ್ತೊಂದು ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.
ಆಂಧ್ರಪ್ರದೇಶ ಎಪಿ ವಾರ್ಡ್ ಮಹಿಳಾ ಕಾರ್ಯದರ್ಶಿಗಳನ್ನು ಮಹಿಳಾ ಪೆÇಲೀಸರೆಂದು ನೇಮಕ ಮಾಡಲಾಗುವುದೆಂದು ಆದೇಶಿಸಿದ್ದ ಸರ್ಕಾರಿ ಆದೇಶ ಸಂಖ್ಯೆ 59, ಸರ್ಕಾರ ತಡೆಹಿಡಿದಿದೆ. ಅವರನ್ನು ಯಾವ ರೀತಿ ಬಳಸಿಕೊಳ್ಳಬೇಕೆಂದು ಆಲೋಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರಿ ನ್ಯಾಯವಾದಿ ಆಂಧ್ರಪ್ರದೇಶ ಹೈಕೋರ್ಟ್ ತಿಳಿಸಿದ್ದಾರೆ.
ಸರ್ಕಾರಿ ಆದೇಶ ಸಂಖ್ಯೆ 59ರ ಮೇಲೆ ದಾಖಲಾಗಿದ್ದ ಪಿಟಿಷನ್ ಗಳನ್ನು ವಿಚಾರಿಸಿದ ಹೈ ಕೋರ್ಟ್, ಈ ಸಂದರ್ಭದಲ್ಲಿ ಸರ್ಕಾರದ ತೀರ್ಮಾನವನ್ನು ನ್ಯಾಯವಾದಿಗಳು ಹೈಕೋರ್ಟ್ ದೃಷ್ಟಿಗೆ ತಂದರೂ ಸಂಪೂರ್ಣ ವಿವರಗಳೊಂದಿಗೆ ಮತ್ತೆ ಅಫಿಡವಿಟ್ ದಾಖಲು ಮಾಡಲಾಗುವುದೆಂದು ತಿಳಿಸಿದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯ ಪೀಠ ಮುಂದಿನ ವಾರಕ್ಕೆ ವಾಯಿದೆ ಹಾಕಿತು.