Connect with us


      




ಸಾಮಾನ್ಯ

ಆಂಡ್ರ್ಯೂ ಮೆಕ್ ಡೊನಾಲ್ಡ್ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ನೇಮಕ

Vanitha Jain

Published

on

ಮೆಲ್ಬೋರ್ನ್: ಏಪ್ರಿಲ್ 13 (ಯು.ಎನ್.ಐ.) ಆಂಡ್ರ್ಯೂ ಮೆಕ್ ಡೊನಾಲ್ಡ್ ಅವರನ್ನು ನಾಲ್ಕು ವರ್ಷಗಳ ಒಪ್ಪಂದದ ಮೇರೆಗೆ ಆಸ್ಟ್ರೇಲಿಯಾ ಪುರುಷರ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಅವರು ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳಿಗೆ ತರಬೇತುದಾರರಾಗಿ ನಿಯೋಜಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಪ್ರಕಟಿಸಿದೆ.

ಮೆಕ್ ಡೊನಾಲ್ಡ್, ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾದ ಯಶಸ್ವಿ ಟೆಸ್ಟ್ ಸರಣಿಯನ್ನು 1-0 ಗೆದ್ದುಕೊಂಡಿತು. ಶ್ರೀಲಂಕಾ ಮತ್ತು ಭಾರತದ ಟೆಸ್ಟ್ ಪ್ರವಾಸಗಳು ಮತ್ತು ತವರು ನೆಲದಲ್ಲಿ ಟಿ20 ವಿಶ್ವಕಪ್ ಒಳಗೊಂಡಿರುವ ಪುರುಷರ ತಂಡಕ್ಕೆ ತರಬೇತುದಾರರಾಗಿ 12 ತಿಂಗಳುಗಳ ಮೊದಲು ಅಧಿಕಾರ ವಹಿಸಿಕೊಂಡರು.

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹಾಕ್ಲೆ, ಆಂಡ್ರ್ಯೂ ಅವರು ಅತ್ಯುತ್ತಮ ಮುಖ್ಯ ಕೋಚ್ ಎಂದು ಈಗಾಗಲೇ ತಮ್ಮ ಸಾಮಥ್ರ್ಯ ತೋರಿಸಿದ್ದಾರೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅವರು ವಿವರಿಸಿದ ದೃಷ್ಟಿಕೋನವು ಪ್ರಭಾವಶಾಲಿ ಮತ್ತು ಉತ್ತೇಜಕವಾಗಿದೆ, ಇದು ನಮ್ಮ ಸ್ಪಷ್ಟ ಆಯ್ಕೆಯಾಗಿದೆ.

ಆಂಡ್ರ್ಯೂ, ಪ್ಯಾಟ್ ಕಮಿನ್ಸ್ ಮತ್ತು ಆರನ್ ಫಿಂಚ್ ಅವರ ನಾಯಕತ್ವದಲ್ಲಿ ಪಾಕಿಸ್ತಾನದ ಪ್ರವಾಸದುದ್ದಕ್ಕೂ ತಂಡವು ಆಡಿದ ರೀತಿಗೆ ಮತ್ತು ಗೌರವವನ್ನು ತೋರಿಸಿರುವ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಆಂಡ್ರ್ಯೂ ಶಾಶ್ವತವಾಗಿ ತರಬೇತುದಾದರಾಗಿ ನೇಮಕವಾಗುತ್ತಿರುವುದು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದರು.

ಇದುವರೆಗಿನ ಪ್ರಯಾಣ ಸಂತೋಷ ತಂದಿದೆ ಮತ್ತು ಮುಂಬರುವ ಅವಧಿಗೆ ಈ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ನನಗೆ ಗೌರವವಿದೆ ಎಂದು ಹೇಳಿದರು.

Share