Connect with us


      




ದೇಶ

ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ ಪತ್ನಿಯ ಚುಂಬಿಸಿದ ಪತಿಗೆ ಥಳಿತ

Vanitha Jain

Published

on

ಅಯೋಧ್ಯೆ: ಜೂನ್ 23 (ಯು.ಎನ್.ಐ.) ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ ಪತ್ನಿಯನ್ನು ಪತಿ ಚುಂಬಿಸಿದ್ದಕ್ಕಾಗಿ ಕೋಪಗೊಂಡ ಜನಸಮೂಹ ವ್ಯಕ್ತಿಯೊಬ್ಬನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಮ್ ಕಿ ಪೈಡಿ ಎಂಬುದು ಸರಯು ನದಿಯ ದಡದಲ್ಲಿರುವ ಘಾಟ್‌ಗಳ ಸರಣಿಯಾಗಿದೆ.

ವೀಡಿಯೊದಲ್ಲಿ, ರಾಮ್ ಕಿ ಪೈಡಿಯಲ್ಲಿ ಸ್ನಾನಮಾಡುತ್ತಿದ್ದಾಗ ಪತ್ನಿಗೆ ಚುಂಬಿಸಲು ಯತ್ನಿಸುತ್ತಾನೆ. ಇದನ್ನು ಕಂಡ ವ್ಯಕ್ತಿಯೊಬ್ಬ ಆತನನ್ನು ಪ್ರಶ್ನಿಸುತ್ತಿದ್ದಂತೆ ಸುತ್ತಮುತ್ತ ಇದ್ದ ಜನ ದಂಪತಿಯನ್ನು ಸುತ್ತುವರಿಯುತ್ತಾರೆ. ಕೆಲವು ಸೆಕೆಂಡುಗಳ ನಂತರ, ಒಬ್ಬ ವ್ಯಕ್ತಿ ಪತಿಯನ್ನು ಎಳೆದುಕೊಂಡು ಹೋಗಿ ಹೊಡೆಯಲು ಪ್ರಾರಂಭಿಸುತ್ತಾನೆ. ಹೆಂಡತಿ ಜನಸಮೂಹವನ್ನು ತಡೆಯಲು ಪ್ರಯತ್ನಿಸುತ್ತಾಳೆ. ಆದರೆ ತಡೆಯಲು ಸಾಧ್ಯವಾಗದಿರುವುದನ್ನು ಕಾಣಬಹುದು.

ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ, ಈ ವಿಡಿಯೋ ಒಂದು ವಾರ ಹಳೆಯದಾಗಿದೆ ಮತ್ತು ಈ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಪೊಲೀಸರು ದಂಪತಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ, ಆದ್ದರಿಂದ ಯಾವ ವ್ಯಕ್ತಿಯಾದರು ದಂಪತಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಯಸಿದರೆ, ದೂರು ದಾಖಲಿಸಬಹುದು ಎಂದು ಹೇಳಿದ್ದಾರೆ.

Share