Connect with us


      
ಸಿನೆಮಾ

ಕ್ರಿಕೆಟ್ ಆಧಾರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ ಅನುಷ್ಕಾ ಶರ್ಮಾ

Vanitha Jain

Published

on

ಮುಂಬೈ: ಜನೆವರಿ 06(ಯು.ಎನ್.ಐ) 2018ರ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಅನುμÁ್ಕ ಶರ್ಮಾ ಕ್ರಿಕೆಟ್ ಜಗತ್ತಿನ ಕಥೆಯ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಮುಂಬರುವ ಕ್ರೀಡಾ ಸಿನಿಮಾ ಚಕ್ಡಾ ‘ಎಕ್ಸ್‍ಪ್ರೆಸ್‍ನಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ. ಹೌದು ಅವರ ಮುಂದಿನ ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಜುಲನ್ ಗೋಸ್ವಾಮಿಯವರ ಜೀವನಾಧಾರಿತ ಕಥೆಯಾಗಿದೆ.

ಹೊಸ ಚಕ್ದಾ ‘ಎಕ್ಸ್‍ಪ್ರೆಸ್’ ಚಿತ್ರದ ಟೀಸರ್ ಅನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಮಚಿಕೊಂಡಿರುವ ಅನುಷ್ಕಾ ಶರ್ಮಾ, ಅಷ್ಟೊಂದು ಪ್ರಾಧಾನ್ಯತೆ ಇಲ್ಲದ ಸಮಯದಲ್ಲೂ ಮಹಿಳಾ ಕ್ರಿಕೆಟ್ ತಂಡ ಪ್ರವೇಶಿಸಿ ಸಾಧನೆಗೈದ ಜುಲನ್ ಗೋಸ್ವಾಮಿಯವರ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಭಾರತದಲ್ಲಿ ಮಹಿಳಾ ಕ್ರಿಕೆಟ್‍ನಲ್ಲಿ ಕ್ರಾಂತಿಯನ್ನುಂಟು ಮಾಡಿದ್ದ ಜೂಲನ್ ಮತ್ತು ಅವರ ತಂಡಕ್ಕೆ ಅಭಿನಂದನೆ ಹೇಳಬೇಕು.ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

Share