Connect with us


      




ಸಿನೆಮಾ

ಅನುಷ್ಕಾ ಶರ್ಮಾಗೆ ಪತ್ರ ಮತ್ತು ಸೋಪ್ ಕಳುಹಿಸಿದ್ದೇಕೆ ರಣವೀರ್ ಸಿಂಗ್?

Lakshmi Vijaya

Published

on

ಮುಂಬೈ: ಏಪ್ರಿಲ್ 19 (ಯು.ಎನ್.ಐ.) ಇಂದು ಹಿಂದಿಯ ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾಗೆ ವಿಶೇಷ ಉಡುಗೊರೆ ಸಿಕ್ಕಿದೆ.

ಟ್ರೇಲರ್ ಬಿಡುಗಡೆಗೂ ಮುನ್ನ ಜಯೇಶ್‌ಭಾಯ್ (ರಣವೀರ್ ಸಿಂಗ್) ನಟಿ ಅನುಷ್ಕಾ ಶರ್ಮಾ ಅವರಿಗೆ ವಿಶೇಷ ಪತ್ರ ಮತ್ತು ಪರಿಮಳರಹಿತ ಸೋಪ್ ವೊಂದನ್ನು ಕಳುಹಿಸಿದ್ದಾರೆ. ನಟಿ ಅನುಷ್ಕಾ ಶರ್ಮ ಸೋಪ್ ಮತ್ತು ಪತ್ರವನ್ನು ಹಿಡಿದಿರುವ ಚಿತ್ರಗಳನ್ನು ತನ್ನ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಹೃದಯ ಕಣ್ಣಿನ ಎಮೋಜಿಯೊಂದಿಗೆ ನಟ ರಣ್ ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಅನುಷ್ಕಾ ಶರ್ಮಾ ಅವರ ಪೋಸ್ಟ್ ಪರಿಶೀಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.instagram.com/p/CcexZDjpvOQ/?utm_source=ig_embed&ig_rid=db66d2aa-c01c-4e33-8729-fbb70cbcdb57

ಜಯೇಶ್‌ಭಾಯ್ ಜೋರ್ದಾರ್ ಚಿತ್ರವನ್ನ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ.  ಸಿನಿಮಾ ಮೇ 13 ರಂದು ಬಿಡುಗಡೆಯಾಗಲಿದೆ.

ಯಶ್ ರಾಜ್ ಫಿಲ್ಮ್ಸ್  ರಣವೀರ್ ಮತ್ತು ಅನುಷ್ಕಾ ಇಬ್ಬರಿಗೂ  ದೊಡ್ಡ ಕೊಟ್ಟ ಸಿನಿಮಾ ಬ್ಯಾನರ್ .   ಬ್ಯಾಂಡ್ ಬಾಜಾ ಬಾರಾತ್‌ನಲ್ಲಿ ರಣವೀರ್, ರಬ್ ನೇ ಬನಾ ದಿ ಜೋಡಿಯಲ್ಲಿ ಅನುಷ್ಕಾ ಖ್ಯಾತಿ ಗಳಿಸಿದರು.

ರಣವೀರ್ ಅವರ ಚೊಚ್ಚಲ ಚಿತ್ರವಾದ ಬ್ಯಾಂಡ್ ಬಾಜಾ ಬಾರಾತ್ ಬಿಡುಗಡೆಯ ಸಮಯದಲ್ಲಿ ರಣವೀರ್ ಜೊತೆ ಅನುಷ್ಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವು.  ಇಬ್ಬರೂ ಲೇಡೀಸ್ ವರ್ಸಸ್ ರಿಕಿ ಬಹ್ಲ್‌ನಲ್ಲಿ ಇಬ್ಬರೂ ನಟಿಸಿದ್ದರು. ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್‌ನ ಮೂರನೇ ಸೀಸನ್‌ನಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ರಣವೀರ್ ಮತ್ತು ಅನುಷ್ಕಾ ಕೊನೆಯ ಬಾರಿಗೆ 2015 ರಲ್ಲಿ ದಿಲ್ ಧಡಕ್ನೆ ದೋ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

Share