Connect with us


      




ದೇಶ

ಏಪ್ರಿಲ್ 1ರಂದು ಪರೀಕ್ಷಾ ಪೇ ಚರ್ಚೆ

Kumara Raitha

Published

on

ನವದೆಹಲಿ:ಮಾ.28 (ಯು.ಎನ್.ಐ) ಈ ಸಾಲಿನ ಪರೀಕ್ಷಾ ಪೇ ಚರ್ಚೆ ದಿನಾಂಕ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 1 ರಂದು ಪರೀಕ್ಷಾ ಪೇ ಚರ್ಚಾ ದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಏಪ್ರಿಲ್ ನಲ್ಲಿ ಬೋರ್ಡ್ ಮತ್ತು ಪ್ರವೇಶ ಪರೀಕ್ಷೆಗಳು ಆರಂಭವಾಗಲಿದ್ದು ಭೀತಿ ಮತ್ತು ಆತಂಕ ಮುಕ್ತವಾಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ 5ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ನಡೆಯಲಿದೆ.2018 ರಿಂದ ಪ್ರತಿವರ್ಷ ಪರೀಕ್ಷಾ ಪೇ ಚರ್ಚಾ ನಡೆಯುತ್ತಿದೆ. PPC 2022 ಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ವರ್ಷದ PPC ಗಾಗಿ 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಹ ನೋಂದಾಯಿಸಿಕೊಂಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂವಾದದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್ ನಿರ್ಬಂಧವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಎನ್ ಸಿಆರ್, ಉತ್ತ್ರಪ್ರದೇಶ, ಹರಿಯಾಣದ ಕೇವಲ ಒಂದು ಸಾವಿರ ವಿದ್ಯಾರ್ಥಿಗಳನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಪರಿಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನ ಈಬಾರಿ ಯುಎಸ್ಎ, ಯುಎಇ ಮತ್ತು ಭಾರತೀಯ ವಲಸಿಗರನ್ನ ಹೊಂದಿರುವ ದೇಶಗಳಲ್ಲಿಯೂ ಸಹ ಪ್ರಸಾರ ಮಾಡಲಾಗುತ್ತೆ ಎಂದರು.

Share